ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಶಿಕ್ಷಕರ ದಿನಾಚರಣೆ, ನಮ್ಮ ನೆಚ್ಚಿನ ಶಿಕ್ಷಕರಿಗೆ ಅಥವಾ ಶಾಲೆಯಲ್ಲಿರುವ ಎಲ್ಲ ಶಿಕ್ಷಕರಿಗೆ ಹೂವು ಕೊಟ್ಟು, ಅವರಿಗಾಗಿ ಕಥೆ ಕವನ ಬರೆದು, ಚಾಕೋಲೆಟ್ಸ್ ತಂದು, ಶಾಲೆಯ ಬೋರ್ಡ್ ಮೇಲೆ ದೊಡ್ಡದಾಗಿ ಹ್ಯಾಪಿ ಟೀಚರ್ಸ್ ಡೇ ಎಂದು ಬರೆದು ಆಚರಿಸಿದ ಸಂಭ್ರಮದ ದಿನ..
ಶಾಲೆ ಕಾಲೇಜು ಕಳೆದ ನಂತರ ಈ ದಿನ ಮಾಮೂಲಿ ವರ್ಕ್ ಡೇಯಾಗಿ ಬದಲಾಗುತ್ತದೆ. ಆದರೆ ಅದಕ್ಕೆ ಅವಕಾಶ ಕೊಡಬೇಡಿ. ನಿಮ್ಮನ್ನು ತಿದ್ದಿ ಬೆಳೆಸಿದ, ಬೇಕಂತ ಅಲ್ಲದಿದ್ರೂ ಬೈದು ಬುದ್ದಿಹೇಳಿದ, ನಿನ್ನ ಕೈಲಿ ಏನೂ ಆಗೋದಿಲ್ಲ ಎಂದು ಚಿವುಟಿದ, ಪ್ರೀತಿಗೆ ನೀನು ಲಾಯಕ್ಕಿಲ್ಲ ಎಂದ, ಜೀವನವನ್ನು ಚಾಲೆಂಜ್ ಆಗಿ ತೆಗೆದುಕೊಳ್ಳೋಕೆ ಪ್ರವೋಕ್ ಮಾಡಿದ, ಬದುಕಿನಲ್ಲಿ ಒಂದೂ ನೋವು ಬರದಂತೆ ಜಾಗ್ರತೆಯಿಂದ ನಡೆಸಿದವರಿಗೆ ಎಲ್ಲರಿಗೂ ಧನ್ಯವಾದ ಹೇಳಿಬಿಡಿ..
5ನೇ ಸೆಪ್ಟೆಂಬರ್ 1888 ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾಗಿತ್ತು. ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಶಿಕ್ಷಕರ ದಿನವು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾಗಿದೆ. ಸರ್ವಪಲ್ಲಿ ರಾಧಾಕೃಷ್ಣನ್ ರಾಜಕಾರಣಿ ಮತ್ತು ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಪಡೆದವರು. 1965ರಲ್ಲಿ ಅವರ ಜನ್ಮದಿನವನ್ನು ಆಚರಿಸಲು ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಅವರನ್ನು ಸಂಪರ್ಕಿಸಿದರು. ಆಗ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮಾತನಾಡಿ, ನನ್ನ ಜನ್ಮದಿನದ ಬದಲು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಬೇಕು. ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಶಿಕ್ಷಕರನ್ನು ಗೌರವಿಸಬೇಕು ಎಂದರು.
ಅದರಂತೆ ಭಾರತದಲ್ಲಿ ಮೊದಲ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5, 1962 ರಂದು ಆಚರಿಸಲಾಯಿತು. ಅಲ್ಲದೆ, ರಾಧಾಕೃಷ್ಣನ್ ಅವರು ಅದೇ ವರ್ಷ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್ ನಂತರ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದರು.