ಇಂದು ವರ್ಷದ ಕಡೆಯ ರಾಹುಗ್ರಸ್ತ ಚಂದ್ರಗ್ರಹಣ, ಎಷ್ಟೊತ್ತಿಗೆ ಕಾಣಲಿದ್ದಾನೆ ಕೆಂಪು ಚಂದ್ರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಾನಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಲಿದೆ. 2022 ರ ಕಡೆಯ ಚಂದ್ರಗ್ರಹಣ ಇದಾಗಿದೆ. ರಾಹುಗ್ರಸ್ತ ಗ್ರಹಣವನ್ನು ರಕ್ತಚಂದ್ರ ಗ್ರಹಣ ಎನ್ನಲಾಗುತ್ತದೆ.
ಕಳೆದ ಅಮವಾಸ್ಯೆಯಂದು ಕೇತಗ್ರಸ್ತ ಸೂರ್ಯಗ್ರಹಣ ಸಂಭವಿಸಿತ್ತು, ಇದರ 15 ದಿನದ ನಂತರ ಚಂದ್ರಗ್ರಹಣ ಸಂಭವಿಸುತ್ತದೆ.

ಬಾನಲ್ಲಿ ತಂಪಾಗಿ ಬೆಳ್ಳಿಯ ಬಣ್ಣದಲ್ಲಿರುವ ಚಂದ್ರ ಇಂದು ಕೆಂಪಾಗುತ್ತಾನೆ. ಈಗ ಸಮಭವಿಸುತ್ತಿರುವ ಗ್ರಹಣ ಪೂರ್ಣಮಟ್ಟದ ಚಂದ್ರಗ್ರಹಣವಾಗಿದೆ. ಈ ಹುಣ್ಣಿಮೆಯಲ್ಲಿ ಚಂದ್ರ ಭೂಮಿಗೆ ಅತೀ ಸಮೀಪ ಬರಲಿದ್ದಾರೆ. ಈ ಸಮಯದಲ್ಲಿ ನೆರಳಿನಿಂದ ಕಪ್ಪು ಕಾಣಬೇಕಾದ ಚಂದ್ರ ಕೆಂಪು ಕಾಣುತ್ತಾನೆ. ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ಹಲವು ದೇವಾಲಯಗಳು ಬಾಗಿಲು ಮುಚ್ಚಿದೆ.

ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರಗ್ರಹಣ ಆರಂಭವಾಗಿ, ಸಂಜೆ 6 ಗಂಟೆ 17 ನಿಮಿಷಕ್ಕೆ ಮುಕ್ತಾಯವಾಗಲಿದೆ. ರಾಜ್ಯದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರವಾಗಲಿದೆ.

ಬೆಂಗಳೂರಿನ ದೇವಾಲಯಗಳಾದ ಕಾಡುಲ್ಲೇಶ್ವರ, ದೊಡ್ಡ ಗಣಪತಿ, ಗವಿಗಂಗಾಧರೇಶ್ವರ, ಗಂಗಮ್ಮ ದೇವಾಲಯ, ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳು ಬೆಳಗ್ಗೆ 11ಕ್ಕೆ ಬಾಗಿಲು ಮುಚ್ಚಲಿವೆ. ಮೈಸೂರಿನ ಚಾಮುಂಡಿ ದೇವಿ ದೇವಾಲಯ, ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ ಮುಚ್ಚಲಿದೆ. ಸಂಜೆ ಗ್ರಹಣ ನಂತರ ಶುಚಿ ಕಾರ್ಯ ನಡೆಸಿ ಮತ್ತೆ ಪೂಜೆ ನೆರವೇರಿಸಲಾಗುವುದು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!