ಪಾನ್-‌ಆಧಾರ್‌ ಲಿಂಕ್‌ ಗೆ ಇಂದು ಕೊನೆದಿನ : ಇಲ್ಲದಿದ್ದರೆ ದಂಡ ಡಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೀವಿನ್ನೂ ನಿಮ್ಮ ಪಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಿಲ್ಲವೇ? ಹಾಗಾದರೆ ಇಂದೇ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಡಬಲ್‌ ದಂಡ ತುಂಬಬೇಕಾಗಿ ಬರಬಹುದು. ಹೌದು ಕಳೆದೊಂದು ವರ್ಷದಿಂದಲೂ ಪ್ಯಾನ್‌-ಆಧಾರ್‌ ಲಿಂಕ್‌ ಮಾಡಿಸಲು ಕೇಂದ್ರ ಸರ್ಕಾರ ಹಾಗೂ ತೆರಿಗೆ ಇಲಾಖೆಯು ಸೂಚಿಸುತ್ತಲೇ ಇದೆ. ಆದರೂ ಮಾಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗಿದೆ. ಈಗಾಗಲೇ ದಂಡ ಜಾರಿಯಲ್ಲಿದ್ದು ಜೂನ್‌.30 ರೊಳಗೆ ಲಿಂಕ್‌ ಮಾಡಿಸಿಕೊಳ್ಳುವವರು 500ರೂ. ದಂಡ ತುಂಬಬೇಕಾಗುತ್ತದೆ. ಇಲ್ಲವಾದಲ್ಲಿ ದಂಡದ ಮೊತ್ತವು ದ್ವಿಗುಣಗೊಳ್ಳಲಿದೆ.

ಕಡಿಮೆ ಮೊತ್ತದ ದಂಡ ತುಂಬಿ ಇಂದೇ ಲಿಂಕ್‌ ಮಾಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಡಬಲ್‌ ದಂಡ ತುಂಬಬೇಕಾಗಬಹುದು ಎಚ್ಚರ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!