Thursday, August 11, 2022

Latest Posts

ಇಂದು ವಿಶ್ವ ತಾಯಂದಿರ ದಿನ: ಅಮ್ಮಂದಿರಿಗೆ ಶುಭ ಕೋರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ವಿಶ್ವ ತಾಯಂದಿರ ದಿನ. ಎಲ್ಲೆಡೆ ತಮ್ಮ ತಾಯಂದಿರಿಗೆ ತಮ್ಮದೇಯಾದ ರೀತಿ ಶುಭಾಶಯ ಕೋರುತ್ತಿದ್ದಾರೆ. ಹಾಗೆಯೇ, ಭಾರತೀಯ ಕ್ರಿಕೆಟಿಗರು ತಮ್ಮ ಅಮ್ಮಂದಿರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳಿದ್ದಾರೆ.

‘ನೀವು ಎಷ್ಟೇ ವಯಸ್ಸಾದರೂ ನನಗಾಗಿ ಪ್ರಾರ್ಥಿಸುವವರು, ತಾಯಿ ನಾನು ಯಾವಾಗಲೂ ನಿಮ್ಮ ಮಗು ನನ್ನ ಜೀವನದಲ್ಲಿ ಇಬ್ಬರು ತಾಯಂದಿರು ನನ್ನನ್ನು ಪೋಷಿಸಿ ಪ್ರೀತಿಸುತ್ತಿದ್ದರು, ಅವರು ಆಯಿ ಹಾಗೂ ಕಾಕು ನನಗೆ ತುಂಬಾ ಸಂತಸವಾಗಿದೆ, ನಾನು ಇಲ್ಲಿ ಕೆಲ ಹಳೆಯ ಫೋಟೋಗಳನ್ನು ಹಂಚಿಕೊಳ್ಳುವೆ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ತಮ್ಮ ತಾಯಿಗೆ ಪ್ರೀತಿಯ ಸಂದೇಶ ನೀಡಿದುವು, ‘ಯಾವಾಗಲೂ ನನ್ನ ಶಕ್ತಿಯ ಆಧಾರಸ್ತಂಭವಾಗಿದ್ದಕ್ಕಾಗಿ ಮತ್ತು ಸರಿಯಾದ ಮಾರ್ಗದರ್ಶನವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮ.. ನೀವು ನನ್ನ ಅತಿದೊಡ್ಡ ಸ್ಫೂರ್ತಿ. ತಾಯಂದಿರ ದಿನದಂದು ಎಲ್ಲಾ ಪ್ರಬಲ ಅಮ್ಮಂದಿರಿಗೆ ಶುಭ ಹಾರೈಸುತ್ತೇನೆ #LoveYouMa’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ಅದೇ ರೀತಿ ಮಾಜಿ ಕ್ರಿಕೆಟರ್ ಸೆಹ್ವಾಗ್ ಕೂಡ ತಮ್ಮ ಪ್ರೀತಿಯ ಅಮ್ಮನಿಗೆ ಶುಭಾಶಯಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss