ದಿನಭವಿಷ್ಯ: ಇಂದು ನಿಮ್ಮ ಪಾಲಿಗೆ ಯಶಸ್ವೀ ದಿನ, ಅಂದುಕೊಂಡಿದ್ದ ಕೆಲಸ ಆಗುವ ಸಾಧ್ಯತೆ ಹೆಚ್ಚು!

ಸೋಮವಾರ, 31 ಜನವರಿ  2022

ಮೇಷ
ನಿಮ್ಮ ಕಾರ್ಯ ಯಶ ಕಂಡರೂ ನೀವು ನಿರೀಕ್ಷಿಸಿದ ಫಲಿತಾಂಶ ದೊರಕುವುದಿಲ್ಲ. ಇದರಿಂದ ನಿರಾಶೆ. ಆಪ್ತರೇ ನಿಮ್ಮ ಟೀಕಾಕಾರರಾಗುವರು.

ವೃಷಭ
ಯಶಸ್ಸು ಇಂದು ಸುಲಭವಾಗಿ ಸಿಗುವುದು. ಕಠಿಣ ಕಾರ್ಯ ಕೂಡ ಸುಲಭದಲ್ಲಿ ಮುಗಿಯುವುದು. ಕೌಟುಂಬಿಕ ಶಾಂತಿ.

ಮಿಥುನ
ಬಾಕಿ ಇರುವ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಬಳಿಕ ಹೊಸ ವ್ಯವಹಾರ ಆರಂಭಿಸಿ. ಹಣಕಾಸು ಸಮಸ್ಯೆ ಕಾಡಬಹುದು. ದೈಹಿಕ ನೋವು ಕಾಡೀತು.

ಕಟಕ
ಬಿಡುವಿಲ್ಲದ ದಿನ. ಕೆಲವು ಉಪಯುಕ್ತ ನಿರ್ಧಾರ ತಾಳಲು ಈ ದಿನ ಬಳಸಿಕೊಳ್ಳಿ. ಕುಟುಂಬಸ್ಥರ ಸಮಸ್ಯೆ ಅರಿತು ಅದನ್ನು ಪರಿಹರಿಸಲು ಯತ್ನಿಸಿ.

ಸಿಂಹ
ವೃತ್ತಿಯಲ್ಲಿ ಫಲಪ್ರದ ದಿನ. ಎಲ್ಲರೊಂದಿಗೆ ಉತ್ತಮ ಸಹಕಾರ ಹಾಗೂ ಹೊಂದಾಣಿಕೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸದೃಢ

ಕನ್ಯಾ
ಯಶಸ್ವಿ ದಿನ. ಬಯಸಿದ ಕಾರ್ಯ ಸಫಲವಾಗುವುದು. ಆರೋಗ್ಯಕ್ಕೆ ಸಂಬಂಸಿ ಹೆಚ್ಚು ಎಚ್ಚರ ವಹಿಸಿ. ಕೌಟುಂಬಿಕ ಸಹಕಾರ, ಸಾಮರಸ್ಯ..

ತುಲಾ
ಕೆಲಸಗಳೆಲ್ಲ ಪೂರ್ಣ. ಯಾವುದೇ ಕಾರ್ಯ ಬಾಕಿಯುಳಿಯದು. ಹಾಗಾಗಿ ಮನಸ್ಸಿಗೆ ನಿರಾಳತೆ. ಆರೋಗ್ಯ ಸಮಸ್ಯೆ ನಿವಾರಣೆ, ಮಾನಸಿಕ ಶಾಂತಿ.

ವೃಶ್ಚಿಕ
ಹೆಚ್ಚುವರಿ ಹೊಣೆಗಾರಿಕೆ ಹೆಗಲೇರುವುದು. ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗುವುದು. ಕುಟುಂಬದಲ್ಲಿ ಅಸಹನೆ ಉಂಟಾದೀತು. ಅದಕ್ಕೆ ನಿಮ್ಮ ವರ್ತನೆ ಕಾರಣ.

ಧನು
ಮನೆಯಲ್ಲಿ ಅಶಾಂತಿ ಉಂಟಾದೀತು. ಸಣ್ಣ ವಿಷಯವನ್ನು ದೊಡ್ಡ ವಿವಾದವಾಗಿ ಪರಿವರ್ತಿಸಬೇಡಿ. ಒತ್ತಡರಹಿತವಾಗಿ ವರ್ತಿಸಿರಿ.

ಮಕರ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಿ. ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಶೀತಲ ಆಹಾರ, ಪಾನೀಯ ಸೇವಿಸಬೇಡಿ.

ಕುಂಭ
ಅಕ ಕೆಲಸ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಕೌಟುಂಬಿಕ ಉದ್ವಿಗ್ನತೆ. ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಸಹನೆ ಅತಿ ಅವಶ್ಯ.

ಮೀನ
ಮುಖ್ಯ ಕಾರ್ಯ ಇಂದು ನಡೆಯದೆ,  ಅದನ್ನು ಮುಂದಕ್ಕೆ ಹಾಕುವ ಪ್ರಸಂಗ ಬರಬಹುದು. ಖಾಸಗಿ ಬದುಕಿನಲ್ಲಿ ಕೆಲವು ಒತ್ತಡಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!