ಗುರುವಾರ, 3 ಫೆಬ್ರವರಿ 2022, ಮಂಗಳೂರು
ಮೇಷ
ಬಾಕಿ ಉಳಿದಿರುವ ಕಾರ್ಯ ಪೂರೈಸಲು ಗಮನ ಕೊಡಬೇಕು. ಸಣ್ಣ ಪುಟ್ಟ ಅಡ್ಡಿಗಳಿಗೆ ಎದೆಗುಂದದಿರಿ. ಕುಟುಂಬದ ಹಿರಿಯರ ಆರೋಗ್ಯ ಸುಧಾರಣೆ.
ವೃಷಭ
ವೃತ್ತಿಯಲ್ಲಿ ಪ್ರಗತಿ. ನಿಮಗೆ ಅನುಕೂಲಕರ ಬೆಳವಣಿಗೆ. ಆದರೆ ಖಾಸಗಿ ಜೀವನದಲ್ಲಿ ನಿರಾಶೆ. ಬಯಸಿದ ಕಾರ್ಯವೊಂದು ಈಡೇರದು.
ಮಿಥುನ
ಉದ್ಯೋಗದಲ್ಲಿ ಅಕ ಕೆಲಸದ ಒತ್ತಡ. ಕಾಲಮಿತಿಯೊಳಗೆ ಕಾರ್ಯ ಪೂರೈಸಬೇಕು. ಸಹೋದ್ಯೋಗಿಗಳ ನೆರವು ಪಡೆಯಲು ಹಿಂಜರಿಕೆ ಬೇಡ.
ಕಟಕ
ಮನೆಯಲ್ಲಿ ಕೆಲಸದ ಹೊಣೆಗಾರಿಕೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ವ್ಯಸ್ತ. ನೆರೆಕರೆಯವರ ಕಿರಿಕಿರಿ ಸಂಭವ. ಸಹನೆ ಯಿಂದ ನಡಕೊಳ್ಳಿ.
ಸಿಂಹ
ವೃತ್ತಿಗೆ ಸಂಬಂಸಿದ ಕಾರ್ಯದಲ್ಲಿ ಹಿನ್ನ್ನಡೆ ಅನುಭವಿಸುವಿರಿ. ಕೆಲಸಗಳು ನೀವು ಬಯಸಿದಂತೆ ಸಾಗದು. ಶೇರು ವ್ಯವಹಾರದಲ್ಲಿ ಏರುಪೇರು.
ಕನ್ಯಾ
ನಿಮ್ಮ ಕಾರ್ಯದಲ್ಲಿ ಸಫಲತೆ. ಇದರಿಂದ ಇತರರಿಗೂ ಒಳಿತಾಗಲಿದೆ. ಅವರಿಂದ ಮೆಚ್ಚುಗೆ ಗಳಿಸುವಿರಿ. ಭಾವನಾತ್ಮಕ ಸನ್ನಿವೇಶ ದಲ್ಲಿ ಸಿಲುಕುವಿರಿ.
ತುಲಾ
ಇಂದು ಅದೃಷ್ಟ ನಿಮಗಿದೆ. ಕೈಗೊಂಡ ಕಾರ್ಯದಲ್ಲಿ ಯಶಸ್ಸು. ಅಪೂರ್ಣ ಕಾರ್ಯವೊಂದು ಪೂರ್ಣಗೊಳ್ಳುವುದು. ಧನವೃದ್ಧಿ.
ವೃಶ್ಚಿಕ
ಉತ್ಸಾಹಪೂರ್ಣ ದಿನ. ಆತ್ಮೀಯರೊಂದಿಗೆ ಆಪ್ತಕಾಲಕ್ಷೇಪ. ಉದ್ಯೋಗ ದಲ್ಲಿ ನಿರೀಕ್ಷಿತ ಬೆಳವಣಿಗೆ. ಸಾಸ ಬೇಕೆಂದು ಬಯಸಿದ ಕಾರ್ಯ ಸಫಲವಾಗುವುದು.
ಧನು
ಉದ್ಯೋಗದಲ್ಲಿ ಮತ್ತು ಮನೆಯಲ್ಲಿ ಅನಪೇಕ್ಷಿತ ಪ್ರಸಂಗ ಎದುರಿಸುವಿರಿ. ಮಾನಸಿಕ ದೃಢತೆ ಕಾಯ್ದುಕೊಳ್ಳಬೇಕು. ಭಾವುಕರಾಗಿ ತಪ್ಪು ನಿರ್ಧಾರ ತಾಳದಿರಿ.
ಮಕರ
ಪ್ರೀತಿಯ ವಿಷಯದಲ್ಲಿ ಮಹತ್ವದ ದಿನ. ಪ್ರಮುಖ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಸಂಕಷ್ಟಗಳು ಪರಿಹಾರ. ಕುಟುಂಬಸ್ಥ ರಿಂದ ನೆರವು.
ಕುಂಭ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಂಘರ್ಷ ಬರದಂತೆ ನೋಡಿಕೊಳ್ಳಿ. ಎರಡರ ಮಧ್ಯೆ ಹೊಂದಾಣಿಕೆ ಸಾಸಿರಿ. ಬಂಧುಗಳ ಹಿತ ಕಾಪಾಡಿ.
ಮೀನ
ಪ್ರೀತಿಯ ವಿಷಯ ದಲ್ಲಿ ಸವಾಲಿನ ದಿನ. ಕ್ಲಿಷ್ಚಕರ ಸ್ಥಿತಿ ಎದುರಿಸುವಿರಿ. ಭಿನ್ನಾಭಿಪ್ರಾಯ ಸಂಭವ. ಮನೆಯಲ್ಲಿ ಅಸಹಕಾರ ಎದುರಿಸುವಿರಿ.