ದಿನಭವಿಷ್ಯ: ಮನಸ್ಸಿನ ಭಾವನೆಗಳನ್ನು ಹೊರಹಾಕುವ ಸಮಯ, ಹಿಂಜರಿಕೆ ಬೇಡ!

ಸೋಮವಾರ, 7 ಫೆಬ್ರವರಿ  2022

ಮೇಷ
ಲಾಭ -ನಷ್ಟಗಳಿಲ್ಲದ ಸಮತೋಲಿತ ದಿನ. ಕುಟುಂಬ ಸದಸ್ಯರು ನಿಮ್ಮ ಸಾಮೀಪ್ಯವನ್ನು ಬಯಸುತ್ತಾರೆ. ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಒಳಿತು.

ವೃಷ
ಕೆಲವು ವಿಚಾರಗಳಲ್ಲಿ ಇಂದು ನಿಮಗೆ ನಿರಾಶೆ ಕಾದಿದೆ. ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆ ಅನುಭವಿಸುವಿರಿ.  ಆರೋಗ್ಯ  ಸಮಸ್ಯೆ.

ಮಿಥುನ
ಹಣಕಾಸು ವಿಚಾರಕ್ಕೆ ಸಂಬಂಧಿಸಿ  ಹೆಚ್ಚು ಕಾರ್ಯನಿರತ. ಕೆಲಸದಲ್ಲಿ ಕೆಲವು ಗೋಜಲು ಉಂಟಾಗ ಬಹುದು. ಅದನ್ನು ನಿವಾರಿಸುವ ಪ್ರಯತ್ನ.

ಕಟಕ
ನಿಮ್ಮ ಮನದ ಭಾವನೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಪ್ರಸಂಗ ಉದ್ಭವಿಸಬಹುದು. ಅದರಿಂದ ಮನಸ್ಸಿಗೆ ನಿರಾಳತೆ.

ಸಿಂಹ
ನಿಮ್ಮ ಕಾರ್ಯವೈಖರಿ ಕೆಲವರಿಂದ  ಪ್ರಶ್ನಿಸಲ್ಪಡುವುದು.  ಅದನ್ನು ನಿರ್ಲಕ್ಷಿಸದಿರಿ. ಅದರ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಿ.

ಕನ್ಯಾ
ಆರ್ಥಿಕ ಪರಿಸ್ಥಿತಿ ಚಿಂತೆ ತರುತ್ತದೆ. ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ. ಏನಿದ್ದರೂ ನಿಮ್ಮ ವಿಶ್ವಾಸ ಕುಂದದಿರಲಿ.

ತುಲಾ
ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಗತದಿನಗಳ ಮೆಲುಕು. ಕೌಟುಂಬಿಕ ಹೊಣೆಗಾರಿಕೆಗಳು ಮಾನಸಿಕ ಒತ್ತಡ ಹೇರುತ್ತವೆ.

ವೃಶ್ಚಿಕ
ಬೇಗ ಕೆಲಸ ಮುಗಿಸಿ, ಸಂಜೆಯ ವೇಳಗೆ ವಿಶ್ರಾಂತಿ ಪಡೆಯು ವುದನ್ನು ಕಾಯುತ್ತೀರಿ. ಕೆಲಸದೊತ್ತಡ ಮನೆಯಲ್ಲೂ ಬೆಂಬಿಡದು.

ಧನು
ಬಾಹ್ಯ ಸೌಂದರ್ಯಕ್ಕೆ ನೀವಿಂದು ವಿಶೇಷ  ಗಮನ ಕೊಡುವಿರಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ ನಿಮ್ಮದು. ಒಟ್ಟಾಗಿ ಸಂತೋಷದ ದಿನ ಕಳೆಯುವಿರಿ.

ಮಕರ
ಗತಕಾಲದ ಆಪ್ತರು ಭೇಟಿಯಾಗಬಹುದು. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಯುವಕರಿಗೆ ಪ್ರೇಮದ ಆಕರ್ಷಣೆ. ಅಧ್ಯಯನ ಕಡೆಗಣಿಸದಿರಿ.

ಕುಂಭ
ಕೆಲದಿನಗಳಿಂದ ಕಾಡುತ್ತಿದ್ದ ಆರ್ಥಿಕ ತೊಂದರೆಯು ಕೊನೆಗೂ ಪರಿಹಾರ ಕಾಣಲಿದೆ. ಇದರಿಂದ ಅವಶ್ಯ ಖರ್ಚುವೆಚ್ಚ ಸರಿದೂಗಿಸುವಿರಿ.

ಮೀನ
ಪ್ರಮುಖ ಸಾಧನೆ ಯೊಂದನ್ನು ಮಾಡುತ್ತೀರಿ. ಎಲ್ಲರಿಂದ ಮೆಚ್ಚುಗೆ. ಭಾವನಾತ್ಮಕವಾಗಿ ಸಂತೋಷದ ಬೆಳವಣಿಗೆ. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!