ದಿನಭವಿಷ್ಯ: ವೃತ್ತಿಯಲ್ಲಿ ಉದಾಸೀನ ಬೇಡ, ನೀವು ಮಾಡುವ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ!

ಮಂಗಳವಾರ, 8 ಫೆಬ್ರವರಿ 2022

ಮೇಷ
ಕೆಲವು ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಬಹುದು. ಆದರೆ ನಿಮ್ಮ ಹಿತಾಸಕ್ತಿಗೆ ಅದು ಅನಿವಾರ್ಯ. ಭಾವುಕತೆಯನ್ನು ಬದಿಗೆ ಸರಿಸಿ.

ವೃಷಭ
ಖಾಸಗಿ ಬದುಕಿನಲ್ಲಿ ಮಾನಸಿಕ ತೊಳಲಾಟ. ಪ್ರೀತಿಪಾತ್ರರ ಕಾರಣದಿಂದ ದುಃಖ ಅನುಭವಿಸುವಿರಿ. ಆಪ್ತರ ಜತೆ ವಾಗ್ವಾದ ನಡೆಸಲು ಹೋಗದಿರಿ.

ಮಿಥುನ
ಖಾಸಗಿ ವಿಷಯ ವೊಂದು ಇಂದು ಆದ್ಯತೆ ಪಡೆಯುತ್ತದೆ. ಹಾಗಾಗಿ ವೃತ್ತಿಯ ವಿಷಯಗಳು ಬದಿಗೆ ಸರಿಯಬಹುದು. ವಿವೇಚನೆಯಿಂದ ನಿರ್ಧಾರ ತಾಳಿರಿ.

ಕಟಕ
ಬಹಳ ದಿನಗಳಿಂದ ಕಾಯುತ್ತಿದ್ದ ಕಾರ್ಯ ಇಂದು ಕೈಗೂಡುವುದು. ಅತ್ಯಂತ ಭಾವುಕ ಕ್ಷಣಕ್ಕೂ ಸಾಕ್ಷಿಯಾಗುವಿರಿ. ಭಾವನಾತ್ಮಕ ಗೆಲುವೂ ನಿಮ್ಮದಾಗಲಿದೆ.

ಸಿಂಹ
ಆತ್ಮೀಯರ ಜತೆಗಿನ ಸಂಬಂಧದಲ್ಲಿ ಏರುಪೇರು ಸಂಭವಿಸಬಹುದು. ವಿವೇಚನೆಯಿಂದ ವರ್ತಿಸಿ. ದುಡುಕಿನ ನಿರ್ಧಾರ ತಾಳದಿರಿ.

ಕನ್ಯಾ
ಯಶಸ್ಸಿಗೆ ಯಾವುದೇ ಅಡ್ಡದಾರಿ ಹಿಡಿಯಬೇಡಿ. ಪ್ರಾಮಾಣಿಕತೆಯಿಂದ ನಡಕೊಳ್ಳಿ. ಅದುವೇ ನಿಮಗೆ ಯಶಸ್ಸು ತಂದುಕೊಡುವುದು.

ತುಲಾ
ಆರ್ಥಿಕ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಧನಪ್ರಾಪ್ತಿ. ಉದ್ಯಮದಲ್ಲಿ ಯಶಸ್ಸು. ಖಾಸಗಿ ಬದುಕಿನಲ್ಲಿ ಆಪ್ತರೊಬ್ಬರು ಸಂತೋಷ ತರುತ್ತಾರೆ.

ವೃಶ್ಚಿಕ
ಮನಸ್ಸಿನಲ್ಲಿ ನಿರಂತರ ನೆಗೆಟಿವ್ ಚಿಂತನೆಗಳು ಬಾಧಿಸಬಹುದು. ಇದರಿಂದ ಪಾರಾಗಲು ಪಾಸಿಟಿವ್ ಚಿಂತನೆಯ ಆಪ್ತರ ಜತೆ ಕಳೆಯಿರಿ. ದೇವರ ಧ್ಯಾನ ಮಾಡಿರಿ.

ಧನು
ನಿಮ್ಮ ಪ್ರಗತಿಗೆ ಇಂದು ಸ್ನೇಹಿತರು ನೆರವು ನೀಡುತ್ತಾರೆ. ಕಷ್ಟವೊಂದು ನಿವಾರಣೆ ಆಗುವುದು. ಕಠಿಣ ಕಾರ್ಯದ ಫಲ ದೊರಕುವುದು.

ಮಕರ
ಕೌಟುಂಬಿಕ ಸೌಹಾರ್ದತೆ ಕಾಯ್ದುಕೊಳ್ಳಿ. ಇತರರ ಭಾವನೆಗೂ ಬೆಲೆ ಕೊಡಿ. ನಿಮ್ಮದೇ ನಿಲುವಿಗೆ ಅಂಟಿಕೊಳ್ಳಬೇಡಿ. ಹೊಂದಾಣಿಕೆ ಮುಖ್ಯ.

ಕುಂಭ
ವೃತ್ತಿಯಲ್ಲಿ ಉದಾಸೀನತೆ ಬೇಡ. ಪ್ರಾಮಾಣಿಕ ಕಾರ್‍ಯಕ್ಕೆ ಒಳ್ಳೆ ಫಲ ದೊರಕುವುದು. ಅನಿರೀಕ್ಷಿತ ಕಡೆಯಿಂದ ಧನಲಾಭ.

ಮೀನ
ಹೊಸ ವ್ಯವಹಾರ ದಲ್ಲಿ  ಹಣ ಹೂಡು ವುದಾದರೆ ಎಚ್ಚರ. ಪರಿಸ್ಥಿತಿ ನಿಮಗೆ ಅನುಕೂಲವಾಗಿಲ್ಲ. ಸ್ವಲ್ಪ ಸಮಯ ಕಾದು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!