ಮೇಷ
ನಿಮ್ಮ ಕಾರ್ಯದಲ್ಲಿ ಎಚ್ಚರ ವಹಿಸಿ. ಮಹತ್ವದ ಹೊಣೆ ನಿಮ್ಮ ಮೇಲೆ ಬೀಳಬಹುದು. ಅಧಿಕ ಖರ್ಚು ನಿಯಂತ್ರಿಸಿ. ಆರೋಗ್ಯ ಸುಸ್ಥಿರ.
ವೃಷಭ
ಕೆಲ ಕಾರಣದಿಂದ ನಿಮ್ಮ ವಿಶ್ವಾಸ ಕುಂದಿದೆ.ನಿರ್ಭೀತರಾಗಿ ಕಾರ್ಯ ನಿರ್ವಹಿಸಿ. ಅನ್ಯರಿಗೆ ನಿಮ್ಮ ಕೆಲಸದ ಬಗ್ಗೆ ವಿವರಣೆ ಕೊಡುವ ಅಗತ್ಯವಿಲ್ಲ.
ಮಿಥುನ
ಹಣದ ವಿಷಯದಲ್ಲಿ ಪ್ರತಿಕೂಲ ಬೆಳವಣಿಗೆ. ಎಚ್ಚರದಿಂದ ನಡಕೊಳ್ಳಿ. ನಿಮ್ಮ ಚಿಂತನೆಗೆ ಬೆಲೆ ಸಿಗದು. ಪ್ರೀತಿಯಲ್ಲಿ ಬೆಳವಣಿಗೆ ಆಗದು.
ಕಟಕ
ಮಾನಸಿಕ ಶಾಂತಿ ಬೇಕೆ? ಇತರರ ಜತೆ ಜಗಳದಿಂದ ದೂರವಿರಿ. ಯಾವುದೇ ಸವಾಲು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ, ಚಿಂತಿಸದಿರಿ.
ಸಿಂಹ
ಕಾರ್ಯಬಾಹುಳ್ಯ ಕೌಟುಂಬಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಕುಟುಂಬದ ಜತೆಗೂ ಕಾಲ ಕಳೆಯಿರಿ. ಹೊರಗಿನ ತಿಂಡಿ ತಿನ್ನದಿರಿ.
ಕನ್ಯಾ
ನಿಮ್ಮ ಗುರಿಯಿಂದ ವಿಚಲಿತರಾಗದಿರಿ. ಆರಂಭದಲ್ಲಿ ವಿಘ್ನ ಬಂದರೂ ಬಳಿಕ ಸುಲಲಿತವಾಗಲಿದೆ. ಆರ್ಥಿಕ ಉನ್ನತಿ.
ತುಲಾ
ಪ್ರಮುಖ ಕಾರ್ಯ ಸಾಽಸಲು ಸಕಾಲ. ಪೂರ್ವ ಸಿದ್ಧತೆಯೊಂದಿಗೆ ಮುನ್ನಡೆಯಿರಿ. ಆರೋಗ್ಯದ ಬಗ್ಗೆ ತುಸು ಕಾಳಜಿ ವಹಿಸಿರಿ.
ವೃಶ್ಚಿಕ
ಕೌಟುಂಬಿಕ ಕಟ್ಟುಪಾಡು ನಿಮ್ಮ ಕೆಲವು ಚಟುವಟಿಕೆಗೆ ಅಡ್ಡಿ ತರುವುದು. ಸಂಗಾತಿ ಜತೆಗೆ ಭಿನ್ನಮತ ಉಂಟಾದೀತು.
ಧನು
ವೃತ್ತಿ ಕ್ಷೇತ್ರದ ಸಮಸ್ಯೆ ಪರಿಹಾರ. ಚಿಂತೆ ನಿವಾರಣೆ. ಹಳೆಯ ತಪ್ಪಿನಿಂದ ಪಾಠ ಕಲಿಯಿರಿ, ಪುನರಾವರ್ತನೆ ಮಾಡದಿರಿ.
ಮಕರ
ನಿಮ್ಮ ನಿರ್ಧಾರ ಭಾವನಾತ್ಮಕವಾಗಿ ನಿಮ್ಮನ್ನು ಗಟ್ಟಿಗೊಳಿಸಲಿದೆ. ನಿಂತ ನೀರಾಗಬೇಡಿ, ಹೊಸತನ ಅಳವಡಿಸಿಕೊಳ್ಳಿ. ವಿಶ್ವಾಸ ಕುಂದದಿರಲಿ.
ಕುಂಭ
ಸಂತೋಷ, ಬೇಸರ ಜೀವನದ ಅವಿಭಾಜ್ಯ ಅಂಗಗಳು. ಅವೆರಡನ್ನೂ ನೀವು ಅನುಭವಿಸುವಿರಿ. ಆದರೆ ಆತ್ಮಸ್ಥೈರ್ಯ ಕುಸಿಯದಿರಲಿ.
ಮೀನ
ಅಧ್ಯಾತ್ಮ, ಧಾರ್ಮಿಕ ವಿಚಾರಗಳು ಹೆಚ್ಚು ಆಪ್ತವೆನ್ನಿಸಬಹುದು. ಸಮಸ್ಯೆ ಮರೆಯಲು ಅದು ಒಂದು ಸಾಧನವಷ್ಟೆ. ವಾಸ್ತವ ಮರೆಯಬೇಡಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ