ಮೇಷ
ಎಲ್ಲಾ ವ್ಯವಹಾರಗಳಲ್ಲಿ ಇಂದು ಸಹನೆ ಅವಶ್ಯ. ಆತುರದಿಂದ ಕಾರ್ಯ ಕೆಟ್ಟೀತು. ಕೆಲ ವಿಚಾರಗಳಲ್ಲಿ ಗೊಂದಲ ಕಾಡಬಹುದು. ಉತ್ಸಾಹ ಕುಂದುವುದು.
ವೃಷಭ
ಎಂತಹ ಕಷ್ಟ ಒದಗಿದರೂ ಮುಖದಲ್ಲಿ ನಗು ಇರಿಸಿಕೊಂಡೇ ಕಾರ್ಯವೆಸಗಿ. ಅದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದು. ಕೌಟುಂಬಿಕ ಸಹಕಾರ.
ಮಿಥುನ
ಏನನ್ನಾದರೂ ಖರೀದಿಸಬೇಕೆಂಬ ನಿಮ್ಮ ಬಯಕೆ ಇಂದು ಈಡೇರಿಸಿಕೊಳ್ಳಿ. ಗ್ರಹಗತಿ ನಿಮಗೆ ಪೂರಕವಾಗಿದೆ. ಕುಟುಂಬದ ಸಹಕಾರ.
ಕಟಕ
ಆದಾಯ, ಖರ್ಚು ಎರಡೂ ಇಂದು ಹೆಚ್ಚು. ಮನಸ್ಸಿನಲ್ಲಿ ಏನೋ ಉದ್ವಿಗ್ನತೆ.ದೈಹಿಕ ಆಲಸ್ಯ ಕಾಡಬಹುದು. ಕಾರ್ಯಗಳು ವಿಳಂಬವಾಗುವವು.
ಸಿಂಹ
ಆತ್ಮವಿಶ್ವಾಸದ ಕೊರತೆ. ಇದರಿಂದ ವ್ಯವಹಾರ ಹಿನ್ನಡೆ. ಪಾಸಿಟಿವ್ ಮನಸ್ಥಿತಿ ಬೆಳೆಸಿಕೊಳ್ಳಿ. ಆತ್ಮೀಯರ ಜತೆ ವಾಗ್ವಾದ ನಡೆದೀತು. ಸಂಯಮ ವಹಿಸಿರಿ.
ಕನ್ಯಾ
ಅಧಿಕ ಕೆಲಸದ ಒತ್ತಡ. ಖಾಸಗಿ ಬದುಕಿನಲ್ಲಿ ಸವಾಲಿನ ಕ್ಷಣ ಎದುರಿಸುವಿರಿ. ಸಹನೆ ಕಳಕೊಂಡರೆ ಸಂಬಂಧದ ಮೇಲೂ ಪರಿಣಾಮ ಉಂಟಾದೀತು.
ತುಲಾ
ವೈಯಕ್ತಿಕ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಸನ್ನಿವೇಶ. ಕೆಲವರಿಗೆ ಕಹಿ ಎನಿಸಿದರೂ ದಿಟ್ಟ ನಿರ್ಧಾರ ತಾಳಲು ಹಿಂಜರಿಕೆ ಬೇಡ.
ವೃಶ್ಚಿಕ
ನಿಮ್ಮ ಬದುಕಲ್ಲಿ ಹಲವಾರು ಬೆಳವಣಿಗೆ ಏಕಕಾಲದಲ್ಲಿ ಸಂಭವಿಸಬಹುದು. ಹಾಗಾಗಿ ನೀವಿಂದು ತಾಳ್ಮೆಯಿಂದ ವ್ಯವಹರಿಸಬೇಕು.
ಧನು
ಇತರರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ಜತೆ ವ್ಯವಹರಿಸಿ. ಕೆಲವೊಮ್ಮೆ ಇತರರ ಕುರಿತಾದ ನಿಮ್ಮ ಅಭಿಪ್ರಾಯ ತಪ್ಪಾಗಿ ರುವ ಸಂಭವವಿದೆ.
ಮಕರ
ವೃತ್ತಿಯಲ್ಲಿ ಇಂದು ಮುಖ್ಯ ನಿರ್ಧಾರ ತಾಳದಿರಿ. ಕೆಲವು ಕಷ್ಟ ಎದುರಿಸುವಿರಿ. ಅನವಶ್ಯ ಖರ್ಚು ಹೆಚ್ಚಳ. ಆರೋಗ್ಯ ಪಾಲನೆಗೆ ಹೆಚ್ಚು ಗಮನ ಕೊಡಿ.
ಕುಂಭ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಸಫಲತೆ. ಹಳೆಯ ಹೂಡಿಕೆಯಿಂದ ಹಣ ಲಾಭ. ಕುಟುಂಬ ಸದಸ್ಯರ ಜತೆ ವಾಗ್ವಾದ ತಪ್ಪಿಸಿರಿ. ಮಾತಿನಲ್ಲಿ ನಿಯಂತ್ರಣವಿರಲಿ.
ಮೀನ
ಕೆಲಸವನ್ನು ಸಕಾಲದಲ್ಲಿ ಮುಗಿಸಲು ಆದ್ಯತೆ ಕೊಡಿ. ಅನವಶ್ಯ ವಿಳಂಬ ನಿಮ್ಮ ಕಾರ್ಯ ಹಾಳು ಮಾಡುತ್ತಿದೆ. ಅನಿರೀಕ್ಷಿತ ಧನ ಲಾಭ ಕಾಣುವಿರಿ.