ದಿನಭವಿಷ್ಯ: ನೀವು ಅಂದುಕೊಂಡ ಕೆಲಸ ಕೈಗೂಡಲಿದೆ.. ನಯವಾದ ಮಾತು ಅಗತ್ಯ

ಮೇಷ
ಶೀತ, ಜ್ವರದಂತಹ ಋತುಸಂಬಂಧಿ ಅನಾರೋಗ್ಯ ಕಾಡಬಹುದು. ತುಸು ಮುನ್ನೆಚ್ಚರ ವಹಿಸಿದರೆ  ಎಲ್ಲ ಸರಿಯಾಗುವುದು. ಖರ್ಚು ಅಧಿಕ.

ವೃಷಭ
ಕುಟುಂಬ ಸದಸ್ಯರ ಜತೆ ಅತೀ ಸಣ್ಣ ವಿಷಯಕ್ಕೆ ದೊಡ್ಡ ರಾದ್ಧಾಂತ ಎಬ್ಬಿಸಬೇಡಿ. ಸಮಾಧಾನ ಚಿತ್ತ ಎಲ್ಲದಕ್ಕೂ ಒಳಿತು. ಆರ್ಥಿಕ ಬಿಕ್ಕಟ್ಟು ಹೆಚ್ಚಬಹುದು.

ಮಿಥುನ
ವೃತ್ತಿಯಲ್ಲಿ ಮೇಲಿನವರ ಬೆಂಬಲ ನಿಮಗೆ ಸಿಗಲಿದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಹೆಚ್ಚು. ಕೆಲಸದ ಒತ್ತಡ ಮರೆಯಲು ಇದು ನಿಮಗೆ ಸಹಕಾರಿ.

ಕಟಕ
ಕುಟುಂಬಸ್ಥರಿಗೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ಯಾವುದೋ ಬೆಳವಣಿಗೆ  ನಿಮ್ಮ ಮನಶ್ಯಾಂತಿ ಕೆಡಿಸಲಿದೆ.

ಸಿಂಹ
ನಿಮ್ಮ ಕಾರ್ಯ ಇಂದು ಹೆಚ್ಚಿನವರ ಗಮನ ಸೆಳೆಯುತ್ತದೆ. ಅದನ್ನು ಸಫಲವಾಗಿಸಿದರೆ ಮನ್ನಣೆಯೂ ದೊರಕುತ್ತದೆ. ಕೌಟುಂಬಿಕ ಸಹಕಾರ, ಸಾಂತ್ವನ.

ಕನ್ಯಾ
ನಿಮ್ಮ ಉದ್ಯೋಗ ವ್ಯವಹಾರ ಇಂದು ಸುಗಮವಾಗಿ ಸಾಗುವುದು. ಅಡ್ಡಿಗಳು ನಿವಾರಣೆ. ಕೌಟುಂಬಿಕ ಉದ್ವಿಗ್ನತೆ ಶಮನ. ಶಾಂತಿ, ಸಮಾಧಾನ.

ತುಲಾ
ಹೊಸ ವ್ಯವಹಾರ, ವ್ಯಾಪಾರ ಆರಂಭಿಸಿದ ಮಂದಿ ಹೆಚ್ಚು ಎಚ್ಚರ ವಹಿಸಬೇಕು. ನಷ್ಟವಾದೀತು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಸಂಭವ.

ವೃಶ್ಚಿಕ
ಕೆಲಸಮಯದಿಂದ ಬಯಸಿದ ಕಾರ್ಯ ಇಂದು ಕೈಗೂಡಲಿದೆ. ವೃತ್ತಿಯಲ್ಲಿ ಉತ್ತಮ ಸಂವಹನ ಸಾಧಿಸಿ. ನಯವಾದ ಮಾತು ಅಗತ್ಯ.

ಧನು
ನಿಮ್ಮ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿಸುವ ಬೆಳವಣಿಗೆ. ಧೈರ್ಯಗುಂದದಿರಿ. ಕುಟುಂಬ ಸದಸ್ಯರ ಕಾಳಜಿ ವಹಿಸಿ. ಅವರಿಗೆ ನೋವಾಗದಂತೆ ನೋಡಿಕೊಳ್ಳಿ.

ಮಕರ
ನಿಮ್ಮ ಉದ್ದೇಶ ಇಂದು ಸುಲಭದಲ್ಲಿ ಈಡೇರದು. ಬಹಳಷ್ಟು ಶ್ರಮ ಪಡಬೇಕಾಗುವುದು. ಮನೆಯಲ್ಲಿ ಅಭಿಪ್ರಾಯ ಭೇದ. ವಾಗ್ವಾದ ಉಂಟಾದೀತು.

ಕುಂಭ
ನಿಮ್ಮ ನಿರೀಕ್ಷೆ ಇಂದು ಈಡೇರದು. ಬಯಸಿದ ಅವಧಿಯಲ್ಲಿ ಕೆಲಸ ಮುಗಿಯದು. ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆ ಉಂಟಾದೀತು.

ಮೀನ
ಬಂಧುಗಳ ಜತೆ ಮೃದುವಾದ ಮಾತಿರಲಿ.  ಕಠೋರ ಮಾತು ಸಂಬಂಧ ಕೆಡಿಸಬಹುದು. ಶೇರು ವ್ಯವಹಾರದಲ್ಲಿ ನಷ್ಟ ಉಂಟಾದೀತು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!