ದಿನಭವಿಷ್ಯ: ಇಂದು ಅತಿಯಾದ ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ.. ಅದರಿಂದ ನಿಮಗೆ ಒಳ್ಳೆಯದಾಗಲಿದೆ..

ಮೇಷ
ಇಂದು ನಿಮಗೆ ನಿಮ್ಮಿಷ್ಟದ ಕಾರ್ಯ ಮಾಡುವ ಅವಕಾಶ ದೊರಕುವುದು. ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿವಾರಣೆ. ಆತ್ಮೀಯರ  ಜತೆ ಕಾಲಕ್ಷೇಪ.

ವೃಷಭ
ಖಾಸಗಿ ಬದುಕು, ವೃತ್ತಿ ಬದುಕಿನ ಮಧ್ಯೆ ಸಮತೋಲನ ಸಾಧಿಸುವಿರಿ. ನಿಮ್ಮ ಸಾಧನೆಗೆ ಇತರರ ಶ್ಲಾಘನೆ. ಆರೋಗ್ಯಪೂರ್ಣ ಆಹಾರ ಸೇವಿಸಿರಿ.

ಮಿಥುನ
ಜೀವನಶೈಲಿಯಲ್ಲಿ ಮಾಡುವ ಸಣ್ಣ ಬದಲಾವಣೆ ದೊಡ್ಡ ಪರಿಣಾಮ ಬೀರಲಿದೆ. ಇದು ನಿಮಗೆ ಅನುಭವಕ್ಕೆ ಬರಲಿದೆ. ಖರ್ಚು ಹೆಚ್ಚಳ.

ಕಟಕ
ದೇಹಾರೋಗ್ಯಕ್ಕಿಂತ ಮನಸ್ಸಿನ ಆರೋಗ್ಯ ಮುಖ್ಯ. ಸಣ್ಣ ವಿಷಯಗಳಿಗೆ ಮನಸ್ಸು ಕೆಡಿಸಿಕೊಂಡು ಕೂರದಿರಿ. ಉಲ್ಲಸಿತ ಮನಸ್ಸು ಒಳ್ಳೆಯದು.

ಸಿಂಹ
ಇಂದು ನಿಮ್ಮ ಮನಸ್ಥಿತಿ ದೃಢವಾಗಿರದು. ಹಾಗಾಗಿ ಪ್ರಮುಖ ನಿರ್ಧಾರ ತಾಳದಿರಿ. ನಿಮ್ಮ ಮನದಳಲು ಆಲಿಸುವ ವ್ಯಕ್ತಿಗಳ ಜತೆ ಕಾಲ ಕಳೆಯಿರಿ.

ಕನ್ಯಾ
ನಿಮ್ಮದಿಂದು ಹೆಚ್ಚು ಗಂಭೀರ ಮನಸ್ಥಿತಿ. ಕೆಲಸದ ಕುರಿತು ಹೆಚ್ಚು ಶ್ರದ್ಧೆ. ಒತ್ತಡವೂ ಅಧಿಕ. ಇತರರು ಸಾಲ  ಕೇಳಿ ಮನಸ್ಸು ಕೆಡಿಸುವರು. ಕೌಟುಂಬಿಕ ಸಹಕಾರ.

ತುಲಾ
ವಿಭಿನ್ನ ಬಗೆಯ ಭಾವಗಳು ಇಂದು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಸಹನೆಯಿರಲಿ, ಎಲ್ಲವೂ ಸುಸೂತ್ರವಾಗಲಿದೆ.

ವೃಶ್ಚಿಕ
ಪ್ರೀತಿಯ ವಿಷಯದಲ್ಲಿ ಗೊಂದಲದ ಮನಸ್ಥಿತಿ. ಸಂಬಂಧದ ವಿಚಾರದಲ್ಲಿ  ಪ್ರಬುದ್ಧರಾಗಿ ನಡಕೊಳ್ಳಿ. ಕೆಟ್ಟ ಹವ್ಯಾಸವನ್ನು ತ್ಯಜಿಸಿರಿ. ಬಂಧುಗಳ ಸಹಕಾರ ಸಿಗುವುದು.

ಧನು
ಸಂಬಂಧದಲ್ಲಿ ಉಂಟಾಗಿದ್ದ ತೊಡಕು ನಿವಾರಿಸಲು ಸೂಕ್ತ ದಿನ. ಸೂಕ್ತ ಸ್ಪಂದನೆ ದೊರಕುವುದು. ಆರೋಗ್ಯ ಸಮಸ್ಯೆ ತುಸು  ಕಾಡಬಹುದು.

ಮಕರ
ನೀವು ಕೈಗೊಳ್ಳುವ ಯಾವುದೇ ಕಾರ್ಯ ಇಂದು ಸಫಲತೆ ಕಾಣುವುದು.  ಬಂಧುಗಳ ಜತೆಗಿನ ಮುನಿಸು ಶಮನ. ಆರ್ಥಿಕ ಉನ್ನತಿ.

ಕುಂಭ
ಅನಿರೀಕ್ಷಿತ ಕಾರ್ಯದೊತ್ತಡ. ಅದನ್ನು ಸರಿಯಾಗಿ ನಿಭಾಯಿಸುವಿರಿ. ಚರ್ಮದ ಸಮಸ್ಯೆ ಕಾಣಿಸಿಕೊಂಡೀತು. ಉಳಿತಾಯ ಹೆಚ್ಚಿಸಿ.

ಮೀನ
ವೃತ್ತಿ ಒತ್ತಡವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರಬಹುದು. ಶಾಂತ ಮನಸ್ಥಿತಿ ಇಂದಿನ ಅಗತ್ಯ. ದೈಹಿಕ ನೋವು ಸಂಭವ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!