ದಿನಭವಿಷ್ಯ: ಇಂದು ಹೊಸ ಕೆಲಸ ಬೇಡ, ಬಾಕಿ ಇರುವ ಹಳೆಯ ಕೆಲಸ ಮುಗಿಸಿದರೆ ಉತ್ತಮ

ಮೇಷ
ಕಾಡುತ್ತಿದ್ದ ಕೆಲವು ಚಿಂತೆಗಳು ಮಾಯವಾಗುವವು. ಇತರರ ಭಾವನೆ ಅರ್ಥ ಮಾಡಿಕೊಳ್ಳುವಿರಿ.ಉತ್ತಮ ಹೊಂದಾಣಿಕೆ.
ವೃಷಭ
ವೃತ್ತಿಯಲ್ಲಿ ಸವಾಲಿನ ದಿನ. ತಪ್ಪುಗಳು ಘಟಿಸದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಕೆಲವರ ಅಸಹಕಾರ ಹೆಚ್ಚುವುದು.
ಮಿಥುನ
ಅಗತ್ಯಕ್ಕೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಇದರಿಂದ ಕಾರ್ಯಗಳು ಸರಾಗ. ಕೌಟುಂಬಿಕ ಭಿನ್ನಾಭಿಪ್ರಾಯ ನಿವಾರಣೆ.
ಕಟಕ
ಬಾಕಿ ಉಳಿದಿರುವ ಕಾರ್ಯ ಮುಗಿಸಿ. ನಿರಾಳರಾಗಿ. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಸಾಂಸಾರಿಕ ಸಮಾಧಾನ. ಮುಖ್ಯ.
ಸಿಂಹ
ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪ್ರತಿಕೂಲವಾದೀತು. ಮನೆಯಲ್ಲಿನ ಕಾರ್ಯಕ್ಕೆ  ತುರ್ತು ಗಮನಹರಿಸಿ.
ಕನ್ಯಾ
ಕೆಲಸದಲ್ಲಿ ಒತ್ತಡ ಕಡಿಮೆಯಾಗುವುದು. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ಕಾರ್ಯದಲ್ಲಿ ಆಸಕ್ತಿ. ಧನಲಾಭ
ತುಲಾ
ಇಂದು ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುವುದು. ಹಣಕ್ಕೆ ಸಂಬಂಧಿಸಿ ತೆಗೆದುಕೊಳ್ಳುವ ನಿರ್ಧಾರ ಉತ್ತಮ ಫಲ ನೀಡಲಿದೆ.
ವೃಶ್ಚಿಕ
ಕಾರ್ಯಗಳೆಲ್ಲ ಸಂಪೂರ್ಣ. ಆದರೂ ತೃಪ್ತಿಯಿಲ್ಲ. ಹೇಳಲಾಗದ ಅತೃಪ್ತಿ , ಅಸಹನೆ ಕಾಡುವುದು. ಅದಕ್ಕೆ ನಿಮ್ಮ ಮನಸ್ಥಿತಿಯೂ ಕಾರಣ.
ಧನು
ಇಂದು ಏರುಪೇರಿನ ದಿನ. ಹೊಣೆಗಾರಿಕೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿ ಸಲು ಸೋಲುವಿರಿ. ಕೌಟುಂಬಿಕ ಸಮಾಧಾನ.
ಮಕರ
ವೃತ್ತಿಯ ಮತ್ತು ಖಾಸಗಿ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಲು ಗಮನ ಕೊಡಿ. ಇಲ್ಲವಾದರೆ ಯಾವುದಾದರೊಂದು ಸಮಸ್ಯೆ ಹೆಚ್ಚಾದೀತು.
ಕುಂಭ
ಋಣಾತ್ಮಕ ಚಿಂತನೆಗಳನ್ನು ಬಿಟ್ಟುಬಿಡಿ. ಅದು ಇಲ್ಲದ ಆತಂಕ ತುಂಬುವುದು. ಕೆಲಸದಲ್ಲಿ ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿ.
ಮೀನ
ಕೆಲವು ವಿಷಯ ನಿಮ್ಮಲ್ಲಿ ಭಾವುಕತೆ ತುಂಬುತ್ತದೆ. ಸಣ್ಣ ವಿಷಯಕ್ಕೂ ಭಾವುಕ ರಾಗುವಿರಿ. ಮನಸ್ಸಿಗೆ ನೋವು.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!