Tuesday, March 21, 2023

Latest Posts

ದಿನಭವಿಷ್ಯ : ನಿಮ್ಮ ವ್ಯಕ್ತಿತ್ವದಲ್ಲಿ ಹಠಾತ್ ಬದಲಾವಣೆ ! ಇತರರ ಬಾಯಿಗೆ ಆಹಾರವಾಗಬಹುದು ಜೋಕೆ

ಭಾನುವಾರ, 5 ಮಾರ್ಚ್ 2023, ಮಂಗಳೂರು

ಮೇಷ
ಪ್ರಾಕ್ಟಿಕಲ್ ಆಗಿ ಚಿಂತಿಸಿ. ಯೋಚಿಸದೆ ಮುನ್ನುಗ್ಗಿದರೆ ಎಲ್ಲ ಕೆಲಸ ಸಾಧ್ಯವಾಗದು. ಸೂಕ್ತ ಯೋಜನೆಯೂ ಅಗತ್ಯ. ಅತಿಯಾದ ಭಾವುಕತೆ ಬೇಡ.

ವೃಷಭ
ವೃತ್ತಿಯಲ್ಲಿ ಹೊಸ ಅವಕಾಶ ತೋರಿ ಬರುವುದು. ಅದನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿ ಎಚ್ಚರ ಅವಶ್ಯ. ದುಡುಕಿನಿಂದ ಮುನ್ನುಗ್ಗದಿರಿ.

ಮಿಥುನ
ಗುರಿಯತ್ತ ಏಕಾಗ್ರಚಿತ್ತ ಇರಲಿ. ನಿಮ್ಮ ಮನಸ್ಸನ್ನು ಬೇರೆಡೆ ಹರಿಸುವ ವಿಷಯಗಳಿವೆ. ಅವನ್ನು ಕಡೆಗಣಿಸಿ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಕಡೆ ಗಮನ ಹರಿಸಿ.

ಕಟಕ
ನಿಮ್ಮ ಸುತ್ತಲಿನ ಕೆಲವರು ವಿಚಿತ್ರ ವರ್ತನೆ ತೋರಬಹುದು. ಅದು ನಿಮ್ಮ ಮೇಲೂ ಪರಿಣಾಮ ಬೀರಬಹುದು. ಧೃತಿಗೆಡದೆ ವರ್ತಿಸಿ.

ಸಿಂಹ
ನಿಮ್ಮ ವರ್ತನೆಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಎಲ್ಲರ ನಿಷ್ಠುರ ಕಟ್ಟಿಕೊಳ್ಳುವಿರಿ. ಕೋಪವನ್ನು ನೀವು ನಿಯಂತ್ರಿಸಬೇಕು.

ಕನ್ಯಾ
ಆಪ್ತರ ಜತೆ ಪ್ರವಾಸ ಹೊರಡುವ ಯೋಜನೆ ನಿಮ್ಮದಾಗಿದ್ದರೆ ಕಾರ್ಯರೂಪಕ್ಕೆ ಇಳಿಸಿ. ನಿಮ್ಮ ಒತ್ತಡಗಳಿಂದ ಮುಕ್ತಿ ದೊರಕೀತು. ಕೌಟುಂಬಿಕ ಸಹಕಾರ.

ತುಲಾ
ನಿಮ್ಮ ಸಾಧನೆಗೆ ಮೆಚ್ಚುಗೆ ಪಡೆಯುವಿರಿ. ಹಾಗೆಂದು ನಿಮ್ಮ ಸವಾಲು ಮುಗಿಯದು. ಬೆನ್ನುಬೆನ್ನಿಗೆ ಹೊಸ ಸವಾಲು ಎದುರಾಗುವುದು.

ವೃಶ್ಚಿಕ
ಆರ್ಥಿಕವಾಗಿ ಸಮಾಧಾನಕರ ದಿನ. ಹಣಕಾಸು ಸ್ಥಿತಿ ಸುಧಾರಣೆ. ಕುಟುಂಬದ ಸದಸ್ಯರಿಂದ ಉತ್ತಮ ಬೆಂಬಲ. ವಿದ್ಯಾರ್ಥಿಗಳಿಗೆ ಯಶಸ್ಸು.

ಧನು
ನೀವಿಂದು ಹೆಚ್ಚು ಪಾಸಿಟಿವ್ ಆಗಿ ವರ್ತಿಸುವಿರಿ. ಇತರರೂ ಇದರಿಂದ ಪ್ರಭಾವಿತ ಆಗುವರು. ಖರೀದಿಯ ಹುಮ್ಮಸ್ಸಿನಲ್ಲಿ ಹಣ ಹೆಚ್ಚು ಖರ್ಚಾದೀತು.

ಮಕರ
ಹೊಸ ಸವಾಲು ನಿಮಗೆ ಎದುರಾಗಬಹುದು. ನಿಭಾಯಿಸುವುದು ಕಷ್ಟವಲ್ಲ. ಆದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿದೆ. ಅದನ್ನು ಸರಿಪಡಿಸಿ.

ಕುಂಭ
ನಿಮ್ಮ ವ್ಯಕ್ತಿತ್ವದಲ್ಲಿ ಹಠಾತ್ ಬದಲಾವಣೆ ತರಬೇಡಿ. ನಿಮ್ಮ ವರ್ತನೆ ಇತರರ ಬಾಯಿಗೆ ಆಹಾರವಾಗಬಹುದು. ಕೌಟುಂಬಿಕ ಅಸಹಕಾರ, ಅಸಹನೆ.

ಮೀನ
ಬಿಡುವಿಲ್ಲದ ದಿನ. ಮಾನಸಿಕ ಕಿರಿಕಿರಿ. ಅತಿಯಾದ ಒತ್ತಡ. ಇತರರ ಮುಂದೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಎಚ್ಚರವಿರಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!