ಶಿವಮೊಗ್ಗದಲ್ಲಿ ‘ಅಂಬೆಗಾಲು-5’ ಕಿರುಚಿತ್ರ ಸ್ಪರ್ಧೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಶಿವಮೊಗ್ಗ ಬೆಳ್ಳಿ ಮಂಡಲ, ಯುಗಧರ್ಮ ಜಾನಪದ ಸಮಿತಿ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಅಂಬೆಗಾಲು-5 ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಹಾಗೂ ಬೆಳ್ಳಿ ಮಂಡಲದ ಕಾಯಾ ರ್ಧ್ಯಕ್ಷ ಡಿ.ಎಸ್. ಅರುಣ್ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 4 ವರ್ಷಗಳಿಂದ ಅಂಬೆಗಾಲು ಕಿರುಚಿತ್ರ ಸ್ಪರ್ಧೆ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಪ್ರತಿ ಚಿತ್ರ 8 ರಿಂದ 10 ನಿಮಿಷ ಇರಬೇಕು. ಜೂನ್ 10 ರ ನಂತರ ಚಿತ್ರೀಕರಿಸಿರಬೇಕು. ಹೆಚ್‌ಡಿ(1280*720) ಅಥವಾ ಪೂರ್ಣ ಹೆಚ್‌ಡಿ(1920*1080), ಎಂಪಿ-4, ಎಂಪೆಗ್-2 ಶ್ರೇಣಿಯಲ್ಲಿ ಇರಬೇಕು. ನಿರ್ದೇಶಕ ಮತ್ತು ನಿರ್ಮಾಪ ರ ಭಾವಚಿತ್ರ ಕಡ್ಡಾಯ. ಕಿರುಚಿತ್ರದ ಮೂರು ನಿಮಿಷಗಳ ದೃಶ್ಯಾವಳಿಗಳ ನಾಲ್ಕು ಡಿವಿಡಿ ಪ್ರೋಮೋಗಾಗಿ ಸಲ್ಲಿಸಬೇಕು.
ಮೂಲ ಕಥೆ ಅಥವಾ ಗೀತೆಗಳನ್ನು ಎರವಲು ಪಡೆದಿದ್ದರೆ ಅದರ ಅನುಮತಿ ಇರಬೇಕು. ಈ ಮೊದಲು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನವಾಗಿರಬಾರದು. ಎಲಿಮಿನೇಷನ್‌ಗೆ ಅವಕಾಶವಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದರು.
ಇದಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಬಿಹೆಚ್ ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು ಭರ್ತಿ ಮಾಡಿ  ಜುಲೈ 20 ರ ಒಳಗೆ 4 ಹೆಚ್.ಡಿ. ಶ್ರೇಣಿಯ ಡಿವಿಡಿ ಸಹಿತ ಸೆಪ್ಟೆಂಬರ್ 20ರ ಒಳಗೆ ಸಲ್ಲಿಸಬೇಕು. ಇದಕ್ಕೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ ಎಂದರು. ವಿವರಗಳಿಗೆ 9844456505, 8310679925, 9449284495 ಸಂಪರ್ಕಿಸಬಹುದಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!