ಇವ..ಸಾಮಾನ್ಯದವನಲ್ಲ, ಒಮ್ಮೆಲೇ 31ಚೀಸ್ ಬರ್ಗರ್‌ ಆರ್ಡರ್‌ ಮಾಡಿದ 2ರ ಪೋರ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕ್ಕ ಮಕ್ಕಳು ಮಾಡುವ ಕೆಲಸ ಕಿರಿಕಿರಿಯುಂಟುಮಾಡಿದರೂ ಸಹ ನಗು ತರಿಸುತ್ತದೆ. ಇವರು ಮಾಡುವ ಚೇಷ್ಟೆಗಳಿಗೆ ಎಷ್ಟೇ ಕೋಪ ಬಂದರೂ ಸುಮ್ಮನಾಗಬೇಕು. ಇಲ್ಲೊಬ್ಬ ಎರಡು ವರ್ಷದ ಪುಟ್ಟ ಪೋರ ತನ್ನ ತಾಯಿಯ ಫೋನ್‌ನಿಂದ 31 ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾನೆ. ಯುನೈಟೆಡ್ ಸ್ಟೇಟ್ಸ್‌ನ ಟೆಕ್ಸಾಸ್‌ನಲ್ಲಿ ಎರಡು ವರ್ಷದ ಬಾಲಕ ತನ್ನ ತಾಯಿಯ ಫೋನ್‌ನಲ್ಲಿ ಸ್ಥಳೀಯ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ನಿಂದ ಎರಡು ಡಜನ್‌ಗೂ ಹೆಚ್ಚು ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ. ಸ್ವಲ್ಪ ಸಮಯದ ನಂತರ ಫೋನ್ ನೋಡಿದ ತಾಯಿಗೆ ಶಾಕ್‌ ಕಾದಿತ್ತು.

ನನ್ನ ಮಗ ಬ್ಯಾರೆಟ್ ಸದಾ ನನ್ನ ಫೋನ್‌ನೊಂದಿಗೆ ಆಟವಾಡುತ್ತಾನೆ. ತನಗೆ ತಿಳಿಯದೆ Dordashನಲ್ಲಿ ಫುಡ್‌ ಆರ್ಡರ್‌ ಮಾಡಿದ್ದಾನೆ. ಫೋನಿನಲ್ಲಿ ಫೋಟೋ ನೋಡುತ್ತಿರಬೇಕು ಎಂದುಕೊಂಡೆ ಆದರೆ, ಆದರೆ ಫುಡ್ ಡೆಲಿವರಿ ಬಾಯ್‌ನಿಂದ ನಿಮ್ಮ ಆರ್ಡರ್ ದೊಡ್ಡದಾಗಿದೆ, ಡೆವರಿ ಸ್ವಲ್ಪ ತಡವಾಗುತ್ತದೆ ಎಂಬ ಸಂದೇಶ ಬಂದಾಗಲೇ ನಾನು ಗಮನಿಸಿದ್ದು ಎಂದು ಬ್ಯಾರೆಟ್‌ ತಾಯಿ ಪ್ರತಿಕ್ರಿಯಿಸಿದ್ದಾರೆ. ಆರ್ಡರ್ ಬಂದ ನಂತರ ತನ್ನ ಮಗನನ್ನು ಬರ್ಗರ್ ಪಕ್ಕದಲ್ಲಿ‌ ಕೂರಿಸಿ ಫೋಟೋ ತೆಗೆದ ಅದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲ್ಸಿ ಗೋಲ್ಡನ್ ಪೋಸ್ಟ್ ಮಾಡಿದ್ದಾರೆ.

ಯಾರಾದರೂ ಆಸಕ್ತಿ ಹೊಂದಿದ್ದರೆ ನಾನು ಮೆಕ್‌ಡೊನಾಲ್ಡ್ಸ್‌ನಿಂದ 31 ಉಚಿತ ಚೀಸ್‌ಬರ್ಗರ್‌ಗಳನ್ನು ಹೊಂದಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಕಮೆಂಟ್‌ಗಳ ಸುರಿಮಳೆ ಹರಿದಿದ್ದು, ಬರ್ಗರ್‌ ಅನ್ನು ಹೇಗೆ ಸಂಗ್ರಹಿಸಬೇಕು ಎಂದು ಸಲಹೆ ನೀಡುತ್ತಾ ತಮಾಷೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!