Monday, July 4, 2022

Latest Posts

ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ತೃತೀಯ ಲಿಂಗಿಗಳಿಗೂ ಪ್ರತ್ಯೇಕ ಶೌಚಾಲಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೃತೀಯ ಲಿಂಗಿಗಳ ಅನುಕೂಲಕ್ಕಾಗಿ ದೆಹಲಿ ಮೆಟ್ರೋ ವಿಶೇಷ ಹೆಜ್ಜೆಯೊಂದನ್ನು ಇರಿಸಿದೆ.
ತನ್ನ ಸ್ಟೇಷನ್‌ಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯ ಇದೆ. ಆದರೆ ತೃತೀಯ ಲಿಂಗಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ.
ಅವರಿಗೂ ಅನುಕೂಲವಾಗುವಂತೆ ಇದೀಗ ಮೂರನೇ ಶೌಚಾಲಯ ನಿರ್ಮಿಸಲಾಗಿದೆ.
ತೃತೀಯ ಲಿಂಗಿಗಳ ಜೊತೆ ವಿಶೇಷ ಚೇತನರೂ ಬಳಸಬಹುದಾದ ಶೌಚಾಲಯ ವ್ಯವಸ್ಥೆಯನ್ನು ದೆಹಲಿ ಮೆಟ್ರೊ ಹೊಂದಿದೆ. ಇದರ ಹೊರತಾಗಿಯೂ ತೃತೀಯ ಲಿಂಗಿಗಳು ಪುರುಷ ಅಥವಾ ಮಹಿಳೆಯರ ಶೌಚಾಲಯ ಬಳಸಲು ಇಚ್ಛಿಸಿದರೆ ಅದಕ್ಕೂ ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss