spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟೋಕಿಯೋ ಒಲಂಪಿಕ್ಸ್ : ಸೆಮಿಫೈನಲಿನಲ್ಲಿ ಸೋತ ಪಿ.ವಿ. ಸಿಂಧು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸ ದಿಗಂತ ಎನ್ ಲೈನ್ ಡೆಸ್ಕ್

ಭಾರತದ ಪಾಲಿಗೆ ಚಿನ್ನ ಯಾ ಬೆಳ್ಳಿ ಪದಕದ ದೊಡ್ಡ ಭರವಸೆಯಾಗಿದ್ದ ಶಟಲ್ ಆಟಗಾರ್ತಿ ಪಿ.ವಿ. ಸಿಂಧು ಸೆಮಿಫೈನಲಿನಲ್ಲಿ ಸೋಲು ಕಾಣುವುದರೊಂದಿಗೆ ದೊಡ್ಡ ನಿರಾಶೆ ಉಂಟು ಮಾಡಿದರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ  ವಿಶ್ವದ ನಂಬರ್ ಒಂದು ಆಟಗಾರ್ತಿಯಾದ  ಚೈನೀಸ್ ತೈಪೆಯ ತೈ ಜು ಯಿಂಗ್ ಅವರು ಸಿಂಧು ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸಿ ಫೈನಲಿಗೆ ಮುನ್ನಡೆದರು.
ಮೊದಲ ಸೆಟ್‌ನಲ್ಲಿ ಸಿಂಧು ಆರಂಭದಿಂದಲೇ ಮುನ್ನಡೆ ಸಾಧಿಸಿದ್ದರು. ಮೊದಲ ಸೆಟ್‌ನ ಮುಕ್ಕಾಲು ಭಾಗವಂತೂ ಸಿಂಧು ತಮ್ಮ ಲೀಡ್ ಉಳಿಸಿಕೊಂಡೇ ಬಂದಿದ್ದರು. ಆದರೆ ಕೊನೆಯ ಹಂತದಲ್ಲಿ ತೈಜು ಸಿಂಧುರನ್ನು ಹಿಂದಿಕ್ಕೆ  21-18ರಿಂದ ಸೆಟ್ ಗೆದ್ದರು.
ಮೊದಲ ಸೆಟ್‌ನ ಸೋಲು ಸಿಂಧು ಮಾನಸಿಕ ಸ್ಥೈರ್ಯ ಕೆಡಿಸಿದಂತೆ ಕಂಡಿತು. ಎರಡನೇ ಸೆಟ್‌ನಲ್ಲಿ ಆರಂಭದಿಂದಲೆ ತೈ ಜು ಮುನ್ನಡೆ ಸಾಧಿಸಿದರು. ಸಿಂಧು ತಮ್ಮ ಎಂದಿನ ಲಯ ಕಂಡುಕೊಳ್ಳಲು ಹೆಣಗಾಡಿದರು. ತಮ್ಮ ಮುನ್ನಡೆಯನ್ನು ಹೆಚ್ಚಿಸುತ್ತಾ ಸಾಗಿದ ತೈ ಜು ಅಂತಿಮವಾಗಿ 21-12 ರಿಂದ ಪಂದ್ಯವನ್ನು ಗೆದ್ದರು. ಇದರೊಂದಿಗೆ ಸಿಂಧು ಅವರ ಸ್ವರ್ಣ ಪದಕ ಗೆಲ್ಲುವ ಕನಸು ನನಸಾಗದಾಯಿತು.
ಇನ್ನೀಗ ಕಂಚಿನ ಪದಕಕ್ಕಾಗಿ ಸಿಂಧು ಅವರು ಇಂದು ಚೀನಾದ ಹಿ ಬಿಂಗ್‌ಜಿಯಾವೋ ಅವರನ್ನು ಎದುರಿಸಬೇಕಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss