Friday, August 19, 2022

Latest Posts

ಟೋಕಿಯೋ ಒಲಿಂಪಿಕ್ಸ್​: ಇಂದು ಭಾರತದ ಮೊದಲ ಬ್ಯಾಚ್​​ ಪ್ರಯಾಣ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಒಲಿಂಪಿಕ್ಸ್​ ಆರಂಭಕ್ಕೆ ದಿನಗಣನೆ ಬಾಕಿ ಇದ್ದು, ಇಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಿಂದ ಭಾರತದ ಮೊದಲ ಬ್ಯಾಚ್​​ ಹೋರಡಲಿದ್ದು, ಕ್ರೀಡಾಪಟುಗಳಿಗೆ ಔಪಚಾರಿಕ ಬಿಳ್ಕೋಡುಗೆ ಸಮಾರಂಭ ನಡೆಯಲಿದೆ.
ಒಟ್ಟು 88 ಮಂದಿ ಇರುವ ಬ್ಯಾಚ್​ ಇದಾಗಿದ್ದು ಇದರಲ್ಲಿ 54 ಮಂದಿ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಪ್ರತಿನಿಧಿಗಳು ಸೇರಿದ್ದಾರೆ. ಈ ಸದಸ್ಯರಿಗೆ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್​ ಸಿಂಗ್​ ಠಾಕೂರ್​ ಔಪಚಾರಿಕೆ ಬೀಳ್ಕೋಡುಗೆ ನೀಡಲಿದ್ದಾರೆ. ಈ ಔಪಚಾರಿಕ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ನಿಸಿತ್​ ಪ್ರಾಮಾಣಿಕ್​ ಕೂಡ ಭಾಗಿಯಾಲಿದ್ದಾರೆ.
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್​, ಟೇಬಲ್​ ಟೆನ್ನಿಸ್​, ಜುಡೋ, ಜಿಮ್ನಾಸ್ಟಿಕ್ಸ್​ ಹಾಗೂ ವೇಟ್​ಲಿಫ್ಟಿಂಗ್​ ಎಂಬ 8 ಕ್ರೀಡೆಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇಂದು ದೆಹಲಿಯಿಂದ ಟೋಕಿಯೋಗೆ ಹಾರಲಿದ್ದಾರೆ.
ಆಟಗಾರರ ಸುರಕ್ಷತೆಯನ್ನ ಗಮನದಲ್ಲಿರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಗಣ್ಯ ವ್ಯಕ್ತಿಗಳಿಗೂ ಕೋವಿಡ್​ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್​ ವರದಿ ಹೊಂದಿರುವವರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ, ಫೇಸ್​ ಮಾಸ್ಕ್​ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನ ಈ ಕಾರ್ಯಕ್ರಮದಲ್ಲಿ ಪಾಲಿಸಲಾಗುತ್ತದೆ. ಈ ಬಾರಿ ಒಲಿಂಪಿಕ್​ನಲ್ಲಿ 127 ಭಾರತೀಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರೋದು ಸಹ ಒಂದು ದಾಖಲೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!