ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಜುಲೈ 23ರಿಂದ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಗೆದ್ದವರಿಗೆ ಪದಕ ವಿತರಣೆ ವೇಳೆ ಸ್ಪರ್ಧಿಗಳು, ಮೆಡಲ್ ನೀಡುವವರು, ಸ್ವಯಂಸೇವಕರು ಮತ್ತು ಇತರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳ ಬಿಡುಗಡೆ ಮಾಡಲಾಗಿದ್ದು, ಯಾರೂ ಕೂಡಾ ಪದಕ ವಿತರಣೆ ವೇಳೆ ಗುಂಪು ಗುಂಪಾಗಿ ಫೋಟೋ ತೆಗೆಸಿಕೊಳ್ಳಬಾರದು, ಪೋಡಿಯಂನ ಬಳಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದೆ.
ದರ ಜೊತೆಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ಗಳಿಸುವ ಸ್ಪರ್ಧಿಗಳ ಪದಕ ಸ್ವೀಕರಿಸುವ ಪೋಡಿಯಂಗಳನ್ನು ಕೂಡಾ ಸಾಕಷ್ಟು ದೂರದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಇಡಲಾಗುತ್ತದೆ ಎಂದು ಐಒಸಿ ತಿಳಿಸಿದೆ.
ಎಲ್ಲರೂ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಪದಕ ವಿತರಣೆ ವೇಳೆ ಹಾಜರಿರುವ ಓರ್ವ ಐಒಸಿ ಸದಸ್ಯ ಮತ್ತು ಇಂಟರ್ನ್ಯಾಷನಲ್ ಫೆಡರೇಷನ್ನ ಓರ್ವ ಪ್ರತಿನಿಧಿ ಮಾತ್ರ ಸ್ಥಳದಲ್ಲಿ ಇರುತ್ತಾರೆ.
ಟೋಕಿಯೊ-2020ರಲ್ಲಿ ಎಲ್ಲರ ಆರೋಗ್ಯದ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಭಾಗವಹಿಸುವ ಎಲ್ಲರೂ ಕೂಡಾ ಆರೋಗ್ಯದ ಜೊತೆಗೆ ಒಲಿಂಪಿಕ್ ವಿಶೇಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮನವಿ ಮಾಡಿದೆ.