ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಒಲಿಂಪಿಕ್ಸ್ಗಾಗಿ ಭಾರತೀಯ ತಂಡದ ಅಧಿಕೃತ ಗೀತೆಯನ್ನು Cheer4India:Hindustani Way ಎಂಬ ಶೀರ್ಷಿಕೆಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಯುವ ಗಾಯಕಿ ಅನನ್ಯಾ ಬಿರ್ಲಾ ಹಾಡಿದ್ದು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಹಾಡು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಟೋಕಿಯೊ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಪಟುಗಳನ್ನು ಮನಸಾರೆ ಬೆಂಬಲಿಸಬೇಕೆಂದು ಅವರು ಸಾರ್ವಜನಿಕರನ್ನು ಕೋರಿದ್ದಾರೆ.
ನಮ್ಮೆಲ್ಲಾ ದೇಶವಾಸಿಗಳು ಈ ಹಾಡನ್ನು ಕೇಳಿ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಟೋಕಿಯೋ ಒಲಿಂಪಿಕ್ಸ್ಗೆ ತೆರಳುವ ಇಡೀ ಭಾರತೀಯ ಕ್ರೀಡಾಪಟುಗಳ ಹಿಂದೆ ನಾವಿದ್ದೇವೆ ಎಂದು ತೋರಿಸಲು ಎಲ್ಲರೂ ಹುರಿದುಂಬಿಸಬೇಕೆಂದು ಒತ್ತಾಯಿಸುತ್ತೇನೆಎಂದು ಕ್ರೀಡಾ ಸಚಿವ ಠಾಕೂರ್ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಹಾಡು ರಚಿಸಿದ್ದಕ್ಕಾಗಿ ರಹಮಾನ್ ಮತ್ತು ಅನನ್ಯಾ ಅವರಿಗೆ ಸಚಿವರು ಧನ್ಯವಾದ ಅರ್ಪಿಸಿದರು.
ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ನರಿಂದರ್ ಬಾತ್ರಾ, ಎಂಒಎಸ್ ನಿಸಿತ್ ಪ್ರಾಮಾಣಿಕ್, ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಜನರಲ್ ಸಂದೀಪ್ ಪ್ರಧಾನ್ ಮತ್ತು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.