ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಟೋಕಿಯೋ ಪ್ಯಾರಾಲಂಪಿಕ್ಸ್ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಎಚ್ 1 ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖಾರಾ ಭಾರತದ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ.
ಫೈನಲ್ನಲ್ಲಿ ಲೆಖಾರಾ ಒಟ್ಟು 249.6 ಸ್ಕೋರ್ನೊಂದಿಗೆ ಚಿನ್ನದ ಪದಕ ಗೆದ್ದಿದ್ದು, ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ವಿಶ್ವ ದಾಖಲೆಗೆ ಸಮವಾಗಿದೆ.
ಟೋಕಿಯೋ ಪ್ಯಾರಾಲಂಪಿಕ್ಸ್ನಲ್ಲಿ ಭಾರತಕ್ಕೆ ಇದು ನಾಲ್ಕನೇ ಪದಕವಾಗಿದೆ.
ಅವನಿ ಅವರು ಒಟ್ಟು 621.7 ಸ್ಕೋರ್ನೊಂದಿಗೆ ಅರ್ಹತಾ ಸುತ್ತಿನಲ್ಲಿ ಅಂತಿಮ ಫಿನಿಶಿಂಗ್ ಏಳರ ಸ್ಥಾನ ಪಡೆದರು. ನಂತರ ಶೋಪೀಸ್ ಈವೆಂಟ್ನ ಫೈನಲ್ಗೆ ಮುನ್ನಡೆಯಲು ನಿಧಾನಗತಿಯ ಪ್ರಾರಂಭದ ನಂತರ ಅವನಿ ಚೇತರಿಕೆ ಕಂಡು ಉತ್ತಮ ಪ್ರದರ್ಶನ ನೀಡಿದರು.