ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಟೊಮ್ಯಾಟೋ ಬೆಲೆ ಗಗನಕ್ಕೇರಿರುವುದು ಗೊತ್ತೇ ಇದೆ. ಟೊಮ್ಯಾಟೋ ಬೆಲೆ ಹೆಚ್ಚಿರುವುದರಿಂದ ಕಂಡ ಕಂಡಲ್ಲಿ ಲೂಟಿಯಾಗುತ್ತಿದೆ. ಕೊಲೆಗಳೂ ನಡೆದಿವೆ. ಟೊಮ್ಯಾಟೋ ಬೆಳೆದ ರೈತನಿಗೆ ಇದೊಂದು ವಜ್ರವಾಗಿ ಪರಿಣಮಿಸಿದೆ. ಕಡಿಮೆ ಬೆಲೆ ಇರುವಲ್ಲಿ ಕೊಳ್ಳೋಕೆ ಮುಂದಾಗಿರುವ ಜನ ಇನ್ನು ಉಚಿತವಾಗಿ ಸಿಕ್ಕರೆ ಸುಮ್ಮನಿರುತ್ತಾರೆಯೇ?
ಹೌದು ಲಾರಿಯೊಂದು ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು, ಟೊಮ್ಯಾಟೋ ಸಂಗ್ರಹಿಸಲು ಮುಗಿಬಿದ್ದರು. ಭಾನುವಾರ ಸಂಜೆ ಕುಮುರಭೀಮ್ ಆಸಿಫಾಬಾದ್ ಜಿಲ್ಲೆಯ ವಾಂಕಿಡಿ ಮಂಡಲದ ಸಮೇಲಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮ್ಯಾಟೋ ತುಂಬಿದ್ದ ಡಿಸಿಎಂ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಕರ್ನಾಟಕದ ಚಿಂತಾಮಣಿಯಿಂದ ಮಹಾರಾಷ್ಟ್ರದ ಚಂದ್ರಾಪುರಕ್ಕೆ ಲೋಡ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ಪಲ್ಟಿಯಾಗಿದೆ. ಲಾರಿಯಲ್ಲಿ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಅಪಘಾತದಿಂದ ಸಣ್ಣಪುಟ್ಟ ಗಾಯಗಳಿಂದ ಹೊರಗೆ ಬಂದೆ ಆದರೆ, ಆ ಲಾರಿಯಲ್ಲಿ ರೂ.11 ಲಕ್ಷ ಮೌಲ್ಯದ ಟೊಮ್ಯಾಟೋ ಇತ್ತು ಎಂದು ಚಾಲಕ ಹೇಳಿದ್ದಾನೆ.
ಟೊಮ್ಯಾಟೋ ಲಾರಿ ಪಲ್ಟಿಯಾದ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಸಿಕ್ಕ ಸಿಕ್ಕಷ್ಟು ದೋಚಿದ್ದಾರೆ. ಅಷ್ಟರಲ್ಲಾಗಲೇ ಪೊಲೀಸರು ಅಲ್ಲಿಗೆ ಬಂದಿದ್ದರಿಂದ ಜನರಿಗೆ ನಿರಾಸೆಯಾಯಿತು. ಟೊಮ್ಯಾಟೋ ಮೊರೆ ಹೋಗಿದ್ದ ಸ್ಥಳೀಯರನ್ನು ಪೊಲೀಸರು ಚದುರಿಸಿದರು.