ಕೇರಳಕ್ಕೆ ಹೊಸ ವೈರಸ್‌ ಎಂಟ್ರಿ: ಟೊಮೆಟೊ ಜ್ವರದಿಂದ ಮಕ್ಕಳು ಹೈರಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದಲ್ಲಿ  ಟೊಮೆಟೊ ಜ್ವರ ಹೊಸ ವೈರಸ್ ಸಂಚಲನ ಮೂಡಿಸುತ್ತಿದೆ. ಈ ವೈರಸ್ ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಕಳವಳ ಸೃಷ್ಟಿಸಿದೆ. ಕೇರಳದಾದ್ಯಂತ ಇದುವರೆಗೆ ಸುಮಾರು 80 ಮಕ್ಕಳು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇದೀಗ ಈ ವೈರಸ್‌ ತಮಿಳುನಾಡಿನಲ್ಲೂ ವಕ್ಕರಿಸಿದ್ದು ಆತಂಕ ಸೃಷ್ಟಿ ಮಾಡಿದೆ.

ಎರಡು ರಾಜ್ಯಗಳ ಗಡಿಭಾಗದ ಗ್ರಾಮಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಕೊಯಮತ್ತೂರಿನಲ್ಲಿ ರಾಜ್ಯಕ್ಕೆ ಪ್ರವೇಶಿಸುವವರಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜ್ವರದ ಲಕ್ಷಣ ಇರುವವರನ್ನು ಗುರುತಿಸಲು ತಮಿಳುನಾಡು-ಕೇರಳ ಗಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೇರಳದ ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಟೊಮೆಟೊ ಜ್ವರ ಸೋಂಕಿತ ಮಕ್ಕಳು ದದ್ದು, ಪೃಷ್ಠದ ಮೇಲೆ ತುರಿಕೆ ಮತ್ತು ನಿರ್ಜಲೀಕರಣದಂತಹ ರೋಗಲಕ್ಷಣಗಳಿಂದ ನೋವನ್ನನುಭವಿಸುತ್ತಿದ್ದಾರೆ.

ಇದು ಜ್ವರ ವೈರಲ್ ಜ್ವರ, ಚಿಕನ್ ಗುನ್ಯಾ ಅಥವಾ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದ್ದಾ ಎಂದು ಕೇರಳದಲ್ಲಿ ಸಂಶೋಧನೆ ನಡೆಯುತ್ತಿದೆ. ಮಕ್ಕಳ ದೇಹವು ಕೆಂಪು ಬಣ್ಣಕ್ಕೆ ತಿರುಗಿ ಮೈಮೇಲೆ ಸಣ್ಣ ಗಾತ್ರದ ಕೆಂಪು ಗುಳ್ಳೆಗಳು ಉಂಟಾಗುವುದರಿಂದ ಇದಕ್ಕೆ ಟೊಮೆಟೊ ಜ್ವರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!