ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದಿನಿಂದ ರಾತ್ರಿ ಕೂಡ ಇರಲಿದೆ KSRTC ಬಸ್ ಸಂಚಾರ: ನಿಗಮ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೆ 2,500ಕ್ಕೂ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ ಗಳು ಸಂಚಾರ ಆರಂಭಿಸಿವೆ. ಇನ್ನೂ ಇಂದು ರಾತ್ರಿಯೂ ಕೂಡ ಸಾರಿಗೆ ಬಸ್ ಸಂಚಾರ ಸಾಮಾನ್ಯವಾಗಿ ಇರಲಿದೆ ಎಂಬುದಾಗಿ ಕೆ ಎಸ್ ಆರ್ ಟಿಸಿ ನಿಗಮವು ತಿಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ನಿಗಮವು, ರಾಜ್ಯ ಸರ್ಕಾರದ ಅನ್ ಲಾಕ್ ಮಾರ್ಗಸೂಚಿ ಕ್ರಮದಂತೆ ಕೆಲ ಜಿಲ್ಲೆಗಳು ಹೊರತುಪಡಿಸಿ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಸರ್ಕಾರ ಸೂಚಿಸಿದಂತೆ ಶೇ.50ರಷ್ಟು ಆಸನಗಳ ಭರ್ತಿಯ ಮೂಲಕ ಸಂಜೆ 6 ಗಂಟೆಯವರೆಗೆ 2,500ಕ್ಕೂ ಹೆಚ್ಚು ಬಸ್ ಗಳು ಸಂಚಾರ ಆರಂಭಿಸಿರೋದಾಗಿ ತಿಳಿಸಿದೆ.
ಇನ್ನೂ ಇಂದಿನಿಂದ ರಾತ್ರಿ ಸಂಚಾರ ಕೂಡ ಇರಲಿದ್ದು, ಈಗಾಗಲೇ ಆನ್ ಲೈನ್ ಮೂಲಕ 1600ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಸಾಮಾನ್ಯವಾಗಿ ಇರಲಿದೆ ಎಂದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss