spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು ವೀರ ಯೋಧ ರಾಜಕುಮಾರ್ ಮಾವಿನಕರ್ ಅಂತಿಮ ಸಂಸ್ಕಾರ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ವರದಿ, ಕಲಬುರಗಿ:

ಭಾರತ- ಬಾಂಗ್ಲಾ ಗಡಿಯ ಧಲಾಯಿ ಪ್ರದೇಶದಲ್ಲಿ ಮಂಗಳವಾರ ಉಗ್ರರ ಗುಂಡೆಟಿಗೆ ಹುತಾತ್ಮರಾದ ಕಲಬುರಗಿಯ ವೀರ ಯೋಧ ರಾಜಕುಮಾರ್ ಮಾವೀನಕರ್ ಅವರ ಅಂತ್ಯಸಂಸ್ಕಾರ ಅವರ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಬಿಸಿಲೂರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ವೀರ ಯೋಧ ಭಾರತ- ಬಾಂಗ್ಲಾ ಗಡಿ ದಲಾಯಿ ಪ್ರದೇಶದಲ್ಲಿ ಉಗ್ರರ ಗುಂಡೆಟಿನಿಂದ ಹುತಾತ್ಮರಾಗಿದ್ದು, ಇಂದು ಯೋಧ ರಾಜಕುಮಾರ್ ಮಾವೀನಕರ್ ಅವರ ಅಂತ್ಯ ಸಂಸ್ಕಾರ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಮಂಗಳವಾರ ಯೋಧ ರಾಜಕುಮಾರ್ ಮಾವೀನಕರ್ ದಲಾಯಿ ಪ್ರದೇಶದಲ್ಲಿ ವೀರ ಮರಣಹೊಂದಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಸ್ವಗ್ರಾಮ ಚಿಂಚನಸೂರಕ್ಕೆ ಪಾರ್ಥಿವ ಶರೀರ ತರಲಾಗಿತ್ತು. ಗ್ರಾಮದ ಅಂಬೇಡ್ಕರ್ ಪುತ್ತಳಿ ಆವರಣದಲ್ಲಿ ಬೆಳಿಗ್ಗೆಯಿಂದ 11 ಗಂಟೆ ವರೆಗೂ ಅಂತಿಮ ದರ್ಶನಕ್ಕಾಗಿ ಇರಿಸಿದ್ದು, ಶಾಸಕ ಬಸವರಾಜ್ ಮತ್ತಿಮೂಡ್, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವೀರಯೋಧ ರಾಜಕುಮಾರ್ ಮಾವೀನಕರ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
11 ಗಂಟೆ ನಂತರ ಅಂತಿಮ ಯಾತ್ರೆ ಅವರ ಜಮೀನಿನ ವರೆಗೂ ಸಾಗುವ ವೇಳೆಗೆ ಹರಿದು ಬಂದಿದ್ದ ಸಹಸ್ರಾರು ಜನರು ಹೂ ಮಳೆ ಸುರಿಸುತ್ತ, ವೀರ ಯೋಧ ರಾಜಕುಮಾರ್ ಅಮರ ರಹೇ ಎಂಬ ಘೋಷಣೆ ಕೂಗಿದರು.
12 ಗಂಟೆ ವೇಳೆಗೆ ಯೋಧನ ಸ್ವಂತ ಜಮೀನಿನಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬೌದ್ದ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ನೇರವೇರಿಸಲಾಯಿತು.
ಮನೆ ಯಜಮಾನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss