ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಮಹಿಳೆಯರು ಮನೆಯ ಜವಾಬ್ದಾರಿ ಜತೆಗೆ ಸಂಗಾತಿಗೆ ಆರ್ಥಿಕ ಸಹಾಯ ಕೂಡ ಮಾಡ್ತಾರೆ. ದಿನಾ ಆಫೀಸು, ಮನೆ, ಕೆಲಸ ಅಂತ ಬ್ಯುಸಿ ಇರುವ ನಾರಿಯರಿಗೆ ಫಿಟ್ ನೆಸ್ ಕೂಡ ಅಷ್ಟೇ ಇಂಪಾರ್ಟೆಂಟ್. ನೀವು ಕೆಲಸಕ್ಕೆ ಹೋಗ್ತೀರಾ? ಹಾಗಿದ್ದರೆ ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಈ ರೀತಿ ಕಾಳಜಿ ಮಾಡಿ..
- ಬೆಳಗ್ಗೆ ಕೆಲ ಹೊತ್ತು ಯೋಗ, ಪ್ರಾಣಾಯಾಮ ಮಾಡಿ.
- ತಿಂಡಿ, ಊಟ ಎಲ್ಲವೂ ಸರಿಯಾದ ಸಮಯಕ್ಕೆ ಆಗಲಿ.
- ಯಾವುದೇ ವಿಚಾರವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗೋದಿಲ್ಲ ಅಂತ ನಿರ್ಧರಿಸಿ.
- ಎಲ್ಲಾ ಬ್ಯುಸಿ ಸಮಯದ ಬಳಿಕ ತಪ್ಪದೇ ನೆಮ್ಮದಿಯ ನಿದ್ದೆ ಮಾಡಿ.
- ಊಟಕ್ಕೂ, ಆಫೀಸ್ ಕೆಲಸಕ್ಕೂ ಬೆರೆಯೇ ಜಾಗ ಇರಲಿ. ಎಲ್ಲವೂ ಒಂದೇ ಟೇಬಲ್ ಮೇಲೆ ಬೇಡ.
- ಆಫೀಸ್ ನಲ್ಲಿ ಊಟದ ನಂತರ ಒಂದು ವಾಕ್ ಹೋಗಿ ಬನ್ನಿ.
- ಫಿಟ್ ನೆಸ್ ಚಾಲೆಂಜ್ ಗಳನ್ನು ಸ್ವೀಕರಿಸಿ.
- ಕೆಲಸದ ಚೇರ್ ಮೇಲೆಯೇ ಕೆಲವೊಂದು ವ್ಯಾಯಾಮ ಮಾಡಿ.
- ಕೆಲಸದ ನಡುವೆ ಹೆಚ್ಚು ನೀರು ಕುಡಿಯೋದನ್ನ ತಪ್ಪಿಸಬೇಡಿ.