Tuesday, September 27, 2022

Latest Posts

ಟೋಕಿಯೋ ಒಲಂಪಿಕ್ಸ್ 2020: ಜಾಹೀರಾತು ರದ್ದು ಮಾಡಿದ ಟೊಯೋಟಾ ಸಂಸ್ಥೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋ ಒಲಂಪಿಕ್ಸ್ ನ ಪ್ರಾಯೋಜಕ ಕಂಪನಿ ಟೊಯೋಟಾ ಒಲಂಪಿಕ್ಸ್ ಸಂಬಂಧಿತ ಟಿವಿ ಜಾಹೀರಾತು ನೀಡುವುದಿಲ್ಲ ಎಂದು ತಿಳಿಸಿದೆ.
ಜುಲೈ 23ರಿಂದ ಆರಂಭವಾಗಲಿರುವ ಒಲಂಪಿಕ್ಸ್ ಗೆ ಟೊಯೋಟಾ ಮೋಟಾರ್ ಕಾರ್ಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕಿಯೊ ಟೊಯೊಡಾ ಮತ್ತು ಇತರ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಟೊಯೋಟಾ ಸೋಮವಾರ ತಿಳಿಸಿದೆ. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರಕಲಿದ್ದು, ಜಪಾನಿನಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಟೊಯೋಟಾ ತಿಳಿಸಿದೆ.
ಇದರಿಂದ ಒಲಂಪಿಕ್ಸ್ ನ ಜಾಹಿರಾತು ವ್ಯವಹಾರಕ್ಕೆ ಹೊಡೆತ ಬಿದ್ದಂತಾಗಿದೆ. ಒಲಂಪಿಕ್ಸ್ ಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದ ಟೊಯೋಟಾ ಸಂಸ್ಥೆ ಇದೀಗ ಜಾಹೀರಾತಿನಿಂದ ಹಿಂದೆ ಉಳಿದಿದೆ. ಜುಲೈ.2 ರಿಂದ ಈವರೆಗೂ ಒಟ್ಟು 58 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರ ಬಗ್ಗೆ ಟೋಕಿಯೋ ಸಂಘಟಿಕರು ಮಾಹಿತಿ ನೀಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!