ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಸ್ತೆ ಅಪಘಾತದಲ್ಲಿ ಗರ್ಭಿಣಿ ಹೊಟ್ಟೆ ಮೇಲೆ ಹರಿದ ವಾಹನ: ತಾಯಿ, ಮಗು ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜಸ್ತಾನದ ಗಂಗರಾರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗರ್ಭಿಣಿ ಹಾಗೂ ನವಜಾತ ಶಿಶು ಸಾವನ್ನಪ್ಪಿದೆ. ಉಳಿದಂತೆ ಪತಿ ಹಾಗೂ ಏಳು ವರ್ಷದ ಮಗು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂಜೆ ವೇಳೆ ಬೈಕ್ ಮೇಲೆ ತೆರಳುತ್ತಿದ್ದಾಗ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಗರ್ಭಿಣಿ ಹೊಟ್ಟೆ ಮೇಲೆ ವಾಹನ ಹರಿದು ಹೋಗಿರುವ ಕಾರಣ ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಈ ವೇಳೆ ಹೊಟ್ಟೆಯಲ್ಲಿ ನವಜಾತ ಶಿಶುವಿದ್ದ ಕಾರಣ ಸ್ಥಳಕ್ಕೆ ವೈದ್ಯರು ಆಗಮಿಸಿದ್ದಾರೆ. ಆದರೆ, ಅದು ಕೂಡ ದುರ್ಘಟನೆಯಲ್ಲಿ ಸಾವನ್ನಪ್ಪಿದೆ. ಇನ್ನು ಬೈಕ್​ನಲ್ಲಿದ್ದ ಏಳು ವರ್ಷದ ಮಗು ಹಾಗೂ ಆಕೆಯ ಗಂಡ ಗಾಯಗೊಂಡಿದ್ದಾರೆ.
ಮಾಹಿತಿ ಪ್ರಕಾರ, ನಗರದ ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್​ ತನ್ನ ಗರ್ಭಿಣಿ ಪತ್ನಿ ಹೆಮಲತಾ ಮತ್ತು ಏಳು ವರ್ಷ ಮಗನೊಂದಿಗೆ ಗಂಗರಾರ್​​ನಿಂದ ಚಿತ್ತೋರಗಢ ಕಡೆಗೆ ಬರುತ್ತಿದ್ದರು.ಈ ವೇಳೆ ಹಿಂದಿನಿಂದ ಬಂದ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ರಸ್ತೆಯಲ್ಲಿ ಬಿದ್ದಿದ್ದು, ಆಕೆಯ ಹೊಟ್ಟೆಯ ಮೇಲೆ ಹರಿದು ಹೋಗಿದೆ. ಹೊಟ್ಟೆ ಮೇಲೆ ಹರಿದ ಕಾರಣ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಶಿಶು ಉಸಿರಾಡುತ್ತಿದ್ದ ಕಾರಣ ಸ್ಥಳಕ್ಕೆ ವೈದ್ಯರು ಆಗಮಿಸಿ, ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಅದು ಸಾವನ್ನಪ್ಪಿದೆ ಎಂದು ತದನಂತರ ಘೋಷಣೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss