ಹೊಸದಿಗಂತ ಆನ್ಲೈನ್ ಡೆಸ್ಕ್:
ಪತಿ, ಅತ್ತೆ ಮಾವನ ಕಿರುಕುಳ ತಾಳದೆ ತಾಯಿ ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯಚೂರಿನ ಮಾನ್ವಿ ತಾಲೂಕಿನ ಆರೋಲಿಯಲ್ಲಿ ಈ ಘಟನೆ ನಡೆದಿದ್ದು, ಹನುಮಂತಿ ಹುಲಿಗೆಯ್ಯ ಮಗು ಉದಯ್ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹನುಮಂತಿ ಹಾಗೂ ಹುಲಿಗೆಯ್ಯ ಅವರ ವಿವಾಹ ಏಳು ವರ್ಷದ ಹಿಂದೆ ನಡೆದಿತ್ತು. ಇತ್ತೀಚೆಗೆ ಗಂಡನ ಮನೆಯವರ ಕಿರುಕುಳ ಹೆಚ್ಚಾಗಿದ್ದು, ಹನುಮಂತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಶುಕ್ರವಾರವೇ ಮಗು ತಾಯಿ ಕಾಣೆಯಾಗಿದ್ದು, ನಿನ್ನೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಬಾವಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಆಕೆಯ ಗಂಡನ ಮನೆಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.