Wednesday, August 17, 2022

Latest Posts

ದೇಶದಲ್ಲಿ 40 ಕೋಟಿಯತ್ತ ಸಮೀಪಿಸುತ್ತಿದೆ ಒಟ್ಟು ಕೊರೋನಾ ಲಸಿಕೆ ನೀಡಿಕೆ ಪ್ರಮಾಣ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಸದ್ಯ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಸೋಂಕಿನ ವಿರುದ್ಧ ಬೃಹತ್ ಕೊವಿಡ್-19 ಲಸಿಕಾ ಅಭಿಯಾನವು ನಡೆಯುತ್ತಿದ್ದು, ಒಟ್ಟು ಲಸಿಕೆ ನೀಡಿಕೆ ಪ್ರಮಾಣವು 40 ಕೋಟಿ ಡೋಸ್ ಸಮೀಪಿಸುತ್ತಿದೆ.
ದೇಶದಲ್ಲಿ ಇದುವರೆಗೆ 39,96,95,879 ಡೋಸ್ ಲಸಿಕೆ ಹಾಕಲಾಗಿದೆ. 50,09,914 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ ಎಂಬ ಗಮನಾರ್ಹ ಸಂಗತಿ. ದೇಶದಲ್ಲಿ ಕಳೆದ 24 ತಾಸುಗಳಲ್ಲಿ 42,12,557 ಜನರಿಗೆ ಲಸಿಕೆ ನೀಡಲಾಗಿದೆ.
ಬೃಹತ್ ಕೊವಿಡ್-19 ಲಸಿಕೆ ಅಭಿಯಾನ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!