ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ವರದಿ, ಕಲಬುರಗಿ:
ರಾಜ್ಯ ಸರ್ಕಾರದ 14 ದಿನಗಳ ಕಠಿಣ ಲಾಕ್ ಡೌನ್ ಹಿನ್ನಲೆಯಲ್ಲಿ ಮಂಗಳವಾರವೂ ಎರಡನೇ ದಿನ ಕಾರಣವಿಲ್ಲದೇ ರಸ್ತೆಗೆ ಇಳಿದಿದ್ದ ವಾಹನಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ. ಸೋಮವಾರ ಪೋಲಿಸರು 399 ವಾಹನಗಳನ್ನು ಜಪ್ತಿ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆಗಿಳಿಯಲಿಲ್ಲ. ಬಸ್ ಆಟೋ ಸಂಚಾರ ಇಲ್ಲದಿರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಹಾಗೇ ಬೆಳಿಗ್ಗೆ 10 ಗಂಟೆಯ ಬಳಿಕ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಭಂಧ ಇರುವುದರಿಂದ ರೈಲಿನ ಮೂಲಕ ನಗರಕ್ಕೆ ಬಂದ ಪ್ರಯಾಣಿಕರು ನಡೆದುಕೊಂಡೆ ಹೋಗುತ್ತಿದ್ದರು.
ಗ್ರಾಮಕ್ಕೆ ತೆರಳಲಾಗದೇ, ರಸ್ತೆಯಲ್ಲೇ ಪರದಾಡಿದ ಕುಟುಂಬ
ಬೆಂಗಳೂರಿನಿಂದ ರೈಲಿನ ಮೂಲಕ ಕಲಬುರಗಿ,ಗೆ ಬಂದ ಪವಾರ ಕುಟುಂಬದ ಸದಸ್ಯರು ತಲ್ಲ ಗ್ರಾಮಕ್ಕೆ ತೆರಳಲಾಗದೇ ನಗರದ ಜಗತ್ ವೃತ್ತದ ನಡು ರಸ್ತೆಯಲ್ಲಿ ಪರದಾಡಿದ ಸನ್ನಿವೇಶ ಬಂದಿದೆ. ಶಿವಾಜಿ ಪವಾರ ಎಂಬುವವರು ಬೆಂಗಳೂರಿನಿಂದ ಕಲಬುರಗಿ ಬಂದು, ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮಕ್ಕೆ ತೆರಳಲು ಬಸ್ ಹಾಗೂ ವಾಹನ ಸೌಕರ್ಯ ಇಲ್ಲದೇ ನಡು ರಸ್ತೆಯಲ್ಲೇ ಕುಳಿತಿದ್ದರು.
ಈ ಸಂದರ್ಭದಲ್ಲಿ ತಮ್ಮ ಅಳಲನ್ನು ತೊಡಿಕೊಂಡು ಮಾತನಾಡಿದ ಅವರು, ಲಾಕ್ ಡೌನ್ ಮಾಡಿದ್ದು, ಸ್ವಾಗತಾರ್ಹ. ಆದರೆ ಮುಂಚೆಯೇ ಮಾಡಿದರೇ ನಮಗೆ ಚೆನ್ನಾಗಿರುತಿತ್ತು. ಆದರೆ ಈಗ ಲಾಕ್ ಡೌನ್ ನಿಂದ ಮನೆಗೆ ಹೋಗಲು ಆಗುತ್ತಿಲ್ಲ ಎಂದರು. ಸಂಬಂಧಿಕರಿಗೆ ಕಲಬುರಗಿ,ಗೆ ವಾಹನ ತರಲು ಹೇಳಿದ್ದೇವೆ. ಆದರೆ ಅವರು ಬರುವಾಗ ಮಧ್ಯದಲ್ಲಿ ಅವರನ್ನು ಸಹ ಪೋಲಿಸರು ತಡೆ ಹಿಡಿದರೇ ನಾವು ರಸ್ತೆಯಲ್ಲೇ ಇರಬೇಕಾಗುತ್ತದೆ ಎಂದರು.
ನಗರದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 45 ವರ್ಷದವರ ಜೊತೆಗೆ 18ರಿಂದ 44 ವರ್ಷದವರಿಗೂ ಲಸಿಕೆ ಹಾಕಲಾಗುತ್ತಿದೆ. ಆದರೆ ಕೋವಿನ್ ಆಫ್ ನಲ್ಲಿ ನೊಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ಹಾಕುವುದಾಗಿ ಜಿಲ್ಲಾಡಳಿತ ತಿಳಿಸಿದ್ದರಿಂದ ಲಸಿಕಾ ಕೇಂದ್ರಗಳ ಬಳಿ ಹಚ್ಚಿನ ಜನ ಕಂಡುಬಂದಿಲ್ಲ.