ತಾಜ್ ಮಹಲ್ ವೀಕ್ಷಣೆಗೆ ಬಂದ ಅರ್ಜೆಂಟೀನಾ ಪ್ರವಾಸಿಗೆ ಕೊರೋನಾ, ಇದೀಗ ಆತನೇ ನಾಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಡಿಸೆಂಬರ್ 26 ರಂದು ತಾಜ್ ಮಹಲ್‌ಗೆ ಭೇಟಿ ನೀಡಿದ ಅರ್ಜೆಂಟೀನಾದ ಪ್ರವಾಸಿಗನೊಬ್ಬನಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ. ಆ ಬಳಿಕ ಆತ ನಾಪತ್ತೆಯಾಗಿದ್ದು ಅಧಿಕಾರಿಗಳಿಗೆ ತಲೆಬಿಸಿ ತಂದೊಡ್ಡಿದ್ದಾನೆ!.
ಬುಧವಾರ ಸಿಕ್ಕಿದ ಆರ್‌ಟಿ-ಪಿಸಿಆರ್ ವರದಿಯು ಆ ವ್ಯಕ್ತಿ ಕೋವಿಡ್ -19 ಪಾಸಿಟಿವ್ ಎಂದು ದೃಢಪಡಿಸಿದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ ಕೂಡಲೇ ಆತ ನಾಪತ್ತೆಯಾಗಿದ್ದಾನೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈತ ನೀಡಿರುವ ಫೋನ್ ನಂಬರ್ ಹಾಗೂ ಹೋಟೆಲ್ ಹೆಸರು ಕೂಡ ತಪ್ಪಾಗಿದ್ದು, ಆತನ ಪತ್ತೆಯೇ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ನಾಪತ್ತೆಯಾದ ವ್ಯಕ್ತಿಯ ವಿವರಗಳನ್ನು ಪಡೆಯಲು ಆರೋಗ್ಯ ಇಲಾಖೆ ಇದೀಗ ಸ್ಥಳೀಯ ಗುಪ್ತಚರ ಘಟಕ, ವಿಮಾನ ನಿಲ್ದಾಣ ಪ್ರಾಧಿಕಾರ, ಎಎಸ್‌ಐ ಮತ್ತು ಹತ್ತಿರದ ಹೋಟೆಲ್‌ಗಳಿಗೆ ಕೇಳಿದೆ.
ಆಗ್ರಾದ ಮುಖ್ಯ ವೈದ್ಯಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಮಾತನಾಡಿ, “ಕೋವಿಡ್-19 ಪಾಸಿಟಿವ್ ಬಂದಿರುವ ಅರ್ಜೆಂಟೀನಾದ ಪ್ರವಾಸಿಗರನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ನೀಡಿದ ಸಂಪರ್ಕ ವಿವರಗಳು ತಪ್ಪಾಗಿದೆ. ಅರ್ಜೆಂಟೀನಾದ ಪ್ರವಾಸಿಗರ ವಿವರಗಳನ್ನು ಒದಗಿಸಲು ಹೋಟೆಲ್‌ಗಳಿಗೆ ತಿಳಿಸಲಾಗಿದೆ. ಅವರು ಇತ್ತೀಚೆಗೆ ಚೆಕ್-ಇನ್ ಮಾಡಿದ್ದಾರೆ. ವ್ಯಕ್ತಿಯ ವಿವರಗಳನ್ನು ಪಡೆಯಲು ನಾವು ವಿಮಾನ ನಿಲ್ದಾಣದ ಪ್ರಾಧಿಕಾರವನ್ನು ಸಹ ಸಂಪರ್ಕಿಸಿದ್ದೇವೆ. ಆತ ಒಮ್ಮೆ ಕಂಡುಬಂದರೆ, ರೋಗವು ಮತ್ತಷ್ಟು ಹರಡುವುದನ್ನು ತಡೆಯಲು ಅವನನ್ನು ಪ್ರತ್ಯೇಕಿಸಲಾಗುತ್ತದೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!