ಪ್ರವಾಸಿಪ್ರಿಯರೇ ಇಲ್ಲಿ ನೋಡಿ, ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್​ ವೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 2026-27ನೇ ಸಾಲಿನ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಪ್ರವಾಸಪ್ರಿಯರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಚಿಕ್ಕಮಗಳೂರಿಗೆ ಜನ ಪ್ರವಾಸ ಕೈಗೊಳ್ಳುತ್ತಾರೆ. ಮುಳ್ಳಯನಗಿರಿ ಹಾಗೂ ಸೀತಾಳಯ್ಯನಗಿರಿಯಿಂದ ರೋಪ್‌ ವೇ ನಿರ್ಮಾಣವಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಪಿಪಿಪಿ ಮಾದರಿಯಲ್ಲಿ ರೋಪ್​ ವೇ ನಿರ್ಮಾಣ ಮಾಡಲಾಗುತ್ತಿದೆ ಮುಳ್ಳಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್‌ವೇ ಇರಲಿದೆ. ಪ್ರವಾಸ ಪ್ರಿಯರಿಗೆ ರೋಪ್‌ ವೇ ರೋಮಾಂಚನಕಾರಿ ಅನುಭವ ನೀಡಲಿದೆ.