ಅಂಗಲಾಚಿದ್ರೂ ಬಿಡದ ಬೈಕ್: ಟೋಯಿಂಗ್ ಸಿಬ್ಬಂದಿ ದುರ್ವತನೆ ವಿರುದ್ಧ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಫುಡ್ ಡೆಲಿವರಿ ಬಾಯ್, ಬೈಕ್ ಬಿಡಿಸಿಕೊಳ್ಳಲು ಸಂಚಾರ ಪೊಲೀಸರ ಟೋಯಿಂಗ್ ವಾಹನದ ಹಿಂದೆ ಓಡುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಈ ಹಿನ್ನೆಲೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ಟೋಯಿಂಗ್ ವಾಹನ ಸೇವೆಯನ್ನು ಅಮಾನತುಗೊಳಿಸಿದ್ದಾರೆ. ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಬೆಂಗಳೂರಿನ ಜೀವನ್‌ಬೀಮಾನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಡೆಲಿವರಿ ಬಾಯ್ ರಸ್ತೆಬದಿ ಬೈಕ್ ನಿಲ್ಲಿಸಿ ಮನೆಯೊಂದಕ್ಕೆ ಪಾರ್ಸೆಲ್ ನೀಡಲು ಹೋಗಿದ್ದಾನೆ. ಈ ವೇಳೆ ಬಂದ ಟೋಯಿಂಗ್ ವಾಹನ ಸಿಬ್ಬಂದಿ ಮತ್ತು ಸಂಚಾರ ಪೊಲೀಸ್, ಬೈಕ್ ಜಪ್ತಿಗೆ ಮುಂದಾಗಿದ್ದು, ಈ ವೇಳೆ ಯುವಕ ಓಡಿ ಬಂದಿದ್ದರೂ ಟೋಯಿಂಗ್ ಸಿಬ್ಬಂದಿ ಬೈಕ್‌ ನೀಡಲು ನಿರಾಕರಿಸಿದ್ದು,ಬೈಕ್ ಬಿಟ್ಟು ಕೊಟ್ಟು ಬಿಡಿ ಎಂದು ಓಡುತ್ತಲ್ಲೇ ಅಂಗಲಾಚಿದ್ದಾನೆ.
ಇದೀಗ ಟೋಯಿಂಗ್ ಸಿಬ್ಬಂದಿ ಬಳಿ ಅಂಗಲಾಚುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಚಾರ ಪೊಲೀಸರು ಮತ್ತು ಟೋಯಿಂಗ್ ಸಿಬ್ಬಂದಿ ವಿರುದ್ಧ ಜನರು ಕಿಡಿಕಾರಿದ್ದಾರೆ
ಈ ಹಿನ್ನೆಲೆ ಟೋಯಿಂಗ್ ವಾಹನದ ಹಿಂದೆ ಯುವಕ, ಓಡುವ ವಿಡಿಯೋ ಪ್ರಕರಣದ ಸಂಬಂಧ ಆಂತರಿಕ ತನಿಖೆಗೆ ರವಿಕಾಂತೇಗೌಡ ಆದೇಶಿಸಿದ್ದಾರೆ. ವಿಚಾರಣೆ ಮುಕ್ತಾಯದವರೆಗೂ ಟೋಯಿಂಗ್ ವಾಹನ ಸೇವೆ ಅಮಾನತಿನಲ್ಲಿ ಇರಿಸಿದ್ದಾರೆ. ಜತೆಗೆ ಟೋಯಿಂಗ್ ಸೇವೆಯಿಂದ ಎಎಸ್‌ಐಯನ್ನು ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!