ಹೊಸದಿಗಂತ ಡಿಜಿಟಲ್ ಡೆಸ್ಕ್:
ಘಟಪ್ರಭಾ ನದಿಯಿಂದ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದ 500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ನೆರೆಯ ಭೀಕರತೆ ಎಷ್ಟಿದೆ ಎಂದರೆ ಡ್ರೋನ್ ಕಣ್ಣಲಿ ಸೆರೆಯಾದ ದೃಶ್ಯ ಗಳನ್ನು ನೋಡಿದರೆ ಒಂದು ಕ್ಷಣ ಅಚ್ಚರಿ ಉಂಟಾಗುತ್ತದೆ.
ಇಡಿ ಗ್ರಾಮದ ಸುತ್ತಮುತ್ತ 500 ಕುಟುಂಬಗಳ ಮನೆ, ನದಿಪಾತ್ರಗಳು ಹಾಗೂ ದೇವಸ್ಥಾನದ ಮನೆಗಳು ಜಲಾವೃತಗೊಂಡಿದ್ದು, ಅವ್ಯವಸ್ಥೆ ಉಂಟಾಗಿದೆ. ಶೇ.80ರಷ್ಟು ಮನೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.