ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಲು ಟೊಯೊಟಾ ದೊಡ್ಡ ಪ್ರಯತ್ನ: ಕೇಂದ್ರ ಸಚಿವ ಡಾ.ಪಾಂಡೆ

ಹೊಸದಿಗಂತ ವರದಿ, ರಾಮನಗರ:

ಸುಧಾರಿತ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಇ-ಡ್ರೆವ್ ಮತ್ತು ಅದರ ತರಭೇತಿ ಸೌಲಭ್ಯದ ವಿಸ್ತರಣೆ ಎಂಬ ವಿದ್ಯುದ್ಧೀಕರಣಗೊಂಡ ಭಾಗಗಳ ಉತ್ಪಾದನೆಯೊಂದಿಗೆ ಟೊಯೋಟಾದ ಸಂಘಟಿತ ಪ್ರಯತ್ನಗಳಿಂದ ಮಾತ್ರ ಸಾಧ್ಯ ಎಂದು ಬೃಹತ್ ಕೈಗಾರಿಕೆಗಳ ಕೇಂದ್ರ ಸಚಿವ ಡಾ.ಮಹೇಂದ್ರ ಪಾಂಡೆ ಅವರು ತಿಳಿಸಿದರು.
ಮೇಕ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಅಭಿಯಾನದ ಮೂಲಕ ಸ್ವಾವಲಂಬನೆ ಸಾಧಿಸುವ ದೇಶದ ದೃಷ್ಟಿಕೋನಕ್ಕೆ ಕೊಡುಗೆ ನೀಡುವುದನ್ನು ಬಲಪಡಿಸುವ ಪ್ರಯತ್ನದ ದಾರಿಯಲ್ಲ ಟೊಯೋಟಾ ಕಿರ್ಲೋಸ್ಕರ್ ಮೋಟಾರ್(ಟಿಕೆಎಂ) ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯ(ಟಿಟಿಟಿಐ) ಎರಡನೇ ಹಂತದ ವಿಸ್ತರಣೆಗೆ ಭೂಮಿ ಪೂಜೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಅವರು ಮಾತನಾಡಿ, ಟಿಟಿಟಿಐನೊಂದಿಗೆ ಟೊಯಾಟಾ ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡುವ ಮತ್ತು ಕರ್ನಾಟಕದ ಯುವಕರಿಗೆ ತಾಂತ್ರಿಕೆ ಪ್ರಗತಿಯಲ್ಲಿ ಉತ್ತಮ ತರಭೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ನ್ಯಾಷನಲ್ ಕೌನ್ಸಿಲ್ ಆಫ್ ವೊಕೇಷನಲ್ ಟ್ರೆöನಿಂಗ್(ಎನ್.ಸಿ.ವಿ.ಟಿ) ಜಪಾನ್ ಇಂಡಿಯಾ ಇನ್ಸಿ÷್ಟಟ್ಯೂಟ್ ಫಾರ ಮ್ಯಾನುಪ್ಯಾಕ್ಟರಿಂಗ್ ಆಟೋಮೋಟಿವ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಟ್ರೆöನಿಂಗ್ (ಡಿಜಿಟಿ) ಟಿಟಿಟಿ-
ಐಗೆ ಮಾನ್ಯತೆ ನೀಡಿರುವುದು ಸಂತೋಷ ತಂದಿದೆ. ಮೂರು ವರ್ಷಗಳ ವಸತಿ ಸಹಿತ ತರಬೇತಿ ಕಾರ್ಯಕ್ರಮವು ಆಟೋಮೊಬೈಲ್‌ಗಳಲ್ಲಿ ಆಳವಾದ ಜ್ಞಾನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತಿರುವುದರಿoದ ಕುಶಲಕರ್ಮಿಗಳಾಗಿ ಅವರ ಕೌಶಲ್ಯಗಳನ್ನು ಮತ್ತು ದೈಹಿಕ ಫಿಟ್‌ನೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಕೌಶಲ್ಯ ಹೆಚ್ಚಿಸಲು ಅನುಕೂಲವಾಗಿದೆ. ಯುವಕರಲ್ಲಿ ಮನಸ್ಸು ಮತ್ತು ಮನೋಭಾವವನ್ನು ಅಭಿವೃದ್ಧಿಪಡಿಸಲು, ಶ್ರಮದಾನ, ಅನಾಥಾಶ್ರಮಗಳು ಮತ್ತು ದೀನದಲಿತ ಸಮುದಾಯಗಳಲ್ಲಿ ಸೇವೆಯ ಮೂಲಕ ಪ್ರಾಯೋಗಿಕ ಕಲಿಕೆಯನ್ನು ಸಹ ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಟೊಯೊಟಾ ಕಿರ್ಲೋಸ್ಕರ್ ಮೋಟರ‍್ಸ್ನ ಉಪಾಧ್ಯಕ್ಷ ವಿಕ್ರಮ್ ಎಸ್. ಕಿರ್ಲೋಸ್ಕರ್ ಅವರು ಮಾತನಾಢಿ, ಇತ್ತೀಚಿನ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕುವುದರೊಂದಿಗೆ ಇಂಗಾಲದ ಹೊರಸೂಸುವಿಕೆಯಲ್ಲಿ ಹೆಚ್ಚಿನ ಕಡಿತ ಮಾಡಲು ಹೆಚ್ಚಿನ ಉದ್ಯೋಗ ಸೃಷ್ಟಿಗೆ ದೇಶಿಯ ಅಗತ್ಯಗಳಿಗಾಗಿ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಗಳಿಗೆ ಸ್ಥಳೀಯ ಸಮುದಾಯ ಅಭಿವೃದ್ಧಿ ಮತ್ತು ನಾವಿನ್ಯತೆಯಲ್ಲಿ ಪ್ರಗತಿಗಾಗಿ ಸ್ಥಳೀಯ ಉತ್ಪಾದನಾ ಕೇಂದ್ರವನ್ನು ರಚಿಸಲು ದೊಡ್ಡ ಪ್ರಮಾಣದ ಹೂಡಿಕೆಯನ್ನು ಪ್ರಾರಂಭಿಸಿಸುವುದು ನಮ್ಮ ಸ್ಪಷ್ಟ ಉದ್ದೇಶಗಳಾಗಿವೆ. ಈ ಕಾರ್ಯಕ್ರಮಗಳು ಬರುತ್ತಿರುವುದರಿಂದ ಯಾರನ್ನೂ ಹಿಂದೆ ಬಿಡಬೇಡಿ ಎಂಬ ನಮ್ಮ ತತ್ವವನ್ನು ಎತ್ತಿಹಿಡಿಲಯ ಸಾಧ್ಯವಾಗಿರುವುದಕ್ಕೆ ನಮಗೆ ಸಂತೋಷ ತಂದಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‌ನಾರಾಯಣ ಅವರು ಮಾತನಾಡಿ, ಟೊಯೋಟಾದ ವಿಶ್ವದರ್ಜೆಯ ಮಾನವ ಸಂಪನ್ಮೂಲವನ್ನು ಹೆಚ್ಚಿಸುವುದಲ್ಲದೇ ದೊಡ್ದ ಸಾಮಾಜಿಕ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ನೀಡುತ್ತಿದೆ. ದೇಶಕ್ಕೆ ಒಂದು ಮಾದರಿ ಸಂಸ್ಥೆ ಎಂದರೆ ತಪ್ಪಾಗಲಾರದು. ಸುಸ್ಥಿರ ಬೆಳವಣಿಗೆಗಳ ಮೂಲಕ ಕರ್ನಾಟಕವನ್ನು ಜಾಗತಿಕ ಪೂರೈಕೆ ಸರಪಳಿಯ ಕೇಂದ್ರವಾಗಿ ಸ್ಥಾಪಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಈಗಾಗಲೇ ಹೊಂದಿರುವುದರಿoದ, ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ
ಟೊಯೊಟಾ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಟೊಯೊಟಾ ಮುಂಚೂಣಿಯಲ್ಲಿದ್ದು ಇಲ್ಲಿಯವರೆಗೆ ಜಾಗತಿಕವಾಗಿ ೨೦ ದಶಲಕ್ಷಕ್ಕೂ ಹೆಚ್ಚು ವಿದ್ಯುದ್ದೀಕೃತ ವಾಹನಗಳನ್ನು ಮಾರಾಟ ಮಾಡಿದೆ. ಭಾರತದಲ್ಲೂ ಟಿಕೆಎಂ ಎಸ್‌ಇವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಮೊದಲ ವಾಹನ ತಯಾರಕರಲ್ಲಿ ಒಂದು. ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟಿçಕ್ ಪವರ್ ಟ್ರೇನ್ ಎರಡನ್ನು ಹೊಂದಿರುವ ಶೆವ್‌ಗಳು ಅತ್ಯಂತ ಪರಿಸರ ಸ್ನೇಹಿಯಾಗಿದ್ದು, ಗ್ರಾಹಕರ ಕಡೆಯಿಂದ ಯಾವುದೇ ಬದಲಾವಣೆಗಳ ಅಗತ್ಯವಿಲ್ಲ. ಟೊಯೊಟಾ ಬಹುಮಾರ್ಗಗಳನ್ನು ಅಳವಡಿಸಿಕೊಳ್ಳುವುದನ್ನು
ಮುಂದುವರೆಸಿದ್ದು, ಇನ್ನಿತರ ವಿದ್ಯುದ್ಧೀಕರಣಗೊಂಡ ಪರ್ಯಾಯ ಇಂಧನ ವಾಹನಗಳನ್ನು ಪರಿಚಯಿಸುತ್ತದೆ. ಮಾಗಡಿ ಶಾಸಕ ಎ.ಮಂಜುನಾಥ್ ಅವರು ಟಿಟಿಟಿಐ ನಲ್ಲಿ ಮೂರು ವರ್ಷಗಳ ಕಾಲ ತರಭೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಈ ಸಮಾರಂಭದಲ್ಲಿ ಕೈಗಾರಿಕೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಪ್ರಸಾದ್, ಜಿಲ್ಲಾಧಿಕಾರಿ ಅವಿನಾಶ್ ರಾಜೇಂದ್ರ ಮೆನನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಬಾಬು, ಟಿಟಿಟಿಐ ನ ಪ್ರಾಂಶುಪಾಲರು ಹಾಗೂ ಟೊಯೊಟಾದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!