Monday, June 27, 2022

Latest Posts

ಹೊಸ ರೂಪಾಂತರಿ “ಮ್ಯು” ಮೇಲೆ ನಿಗಾ: WHO

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಕೊಲಂಬಿಯಾದಲ್ಲಿ ಪತ್ತೆಯಾದ ಕೋವಿಡ್ ವೈರಾಣು ರೂಪಾಂತರಿ “ಮ್ಯು”(ಬಿ.1.621)ರ ಮೇಲೆ ತಾನು ನಿಗಾ ಇಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಹೇಳಿದೆ.
ಈ ರೂಪಾಂತರಿ ಲಸಿಕೆಗಳನ್ನು ಕೂಡಾ ನಿರೋಸಿ ಅಪಾಯಕಾರಿಯಾಗಿದೆ. ಮನುಷ್ಯನ ರೋಗನಿರೋಧಕ ಶಕ್ತಿಯನ್ನೇ ಇದು ಭೇದಿಸಬಲ್ಲದು ಎಂಬ ವರದಿಗಳ ಹಿನ್ನೆಲೆಯಲ್ಲಿ , ಈ ವೈರಾಣು ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ಅದು ಹೇಳಿದೆ. ಈ ಹೊಸ ರೂಪಾಂತರಿ ಜಗತ್ತಿನ ವಿವಿಧ ದೇಶಗಳಲ್ಲಿ , ಅದರಲ್ಲೂ ಲಸಿಕೆ ಪಡೆಯದ ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದೆ ಎಂಬುದಾಗಿ ಹೇಳಲಾಗಿದೆ.ಈಗಾಗಲೇ ಆಲಾ ರೂಪಾಂತರಿ 193 ದೇಶಗಳಲ್ಲಿದ್ದರೆ, ಡೆಲ್ಟಾ 170 ದೇಶಗಳಲ್ಲಿದೆ . “ಮ್ಯು” (ದಕ್ಷಿಣ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಈಗ ಕಂಡುಬಂದಿದೆ) ಸೇರಿದಂತೆ ಇತರ 5 ರೂಪಾಂತರಿಗಳ ಮೇಲೆ ನಿಗಾ ಇಡಲಾಗಿದೆ ಎಂದದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss