ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೈಕ್ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದರೆ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ದಂಡ ವಿಧಿಸುತ್ತಾರೆ. ಆದರೆ ಇಲ್ಲಿ ಪೊಲೀಸರು ಟ್ರ್ಯಾಕ್ಟರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ.
ಹೌದು, ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬಿರ್ಕೂರ್ ಮಂಡಲ್ನ ಚಿಂಚೊಳ್ಳಿ ನಿವಾಸಿಯಾಗಿರುವ ಸತೀಶ್ ಎಂಬಾತ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಚಲನ್ ನೀಡಿದ್ದಾರೆ. ಅಚ್ಚರಿ ಎಂದರೆ ಚಲನ್ನಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕೆ 135 ರೂ.ದಂಡ ವಿಧಿಸಲಾಗಿದೆ ಎಂದು ನಮೂದಿಸಲಾಗಿದೆ.
ಜೊತೆಗೆ ನಿಮ್ಮ ವಾಹನವು ಇದಕ್ಕೂ ಮೊದಲು 9 ಬಾರಿ ನಿಯಮ ಉಲ್ಲಂಘಿಸಿದ್ದು, ಅದರ ಒಟ್ಟು ದಂಡದ ಮೊತ್ತ 1035 ರೂ. ಬಾಕಿ ಉಳಿದಿದೆ ಎಂದು ಚಲನ್ನಲ್ಲಿ ದಾಖಲಾಗಿದೆ.