ಬೆಲೇಕೇರಿ ಬಂದರು ವ್ಯಾಪ್ತಿಯಲ್ಲಿ ದುರಂತ: ಚಿಪ್ಪುಮೀನು ಹಿಡಿಯಲು ಹೋಗಿದ್ದ ಮೀನುಗಾರ ಜಲಸಮಾಧಿ
ಹೊಸದಿಗಂತ ವರದಿ ಅಂಕೋಲಾ: ನೀಲಿಕಲ್ಲು ಜಾತಿಯ ಚಿಪ್ಪುಮೀನು ತೆಗೆಯಲು ಸಮುದ್ರಕ್ಕೆ ಇಳಿದ ಮೀನುಗಾರ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಬೆಲೇಕೇರಿ ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಲೇಕೇರಿ ನಿವಾಸಿ ಮಾರುತಿ ಸುಬ್ರಾಯ ಬಾನಾವಳಿಕರ(65) ಮೃತ ದುರ್ದೈವಿಯಾಗಿದ್ದು ನೀಲಿಕಲ್ಲು ತೆಗೆಯಲೆಂದು ಸಮುದ್ರದ ಹಿನ್ನೀರಿನ ಪ್ರದೇಶದಲ್ಲಿ ನೀರಿಗೆ ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ; ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Copy and paste this URL into your WordPress site to embed
Copy and paste this code into your site to embed