ಪಾವಗಡ ತಾಲ್ಲೂಕಿನಲ್ಲಿ ದುರಂತ: ಗುಡಿಸಲು ಮನೆಗೆ ಬೆಂಕಿ ಬಿದ್ದು ವೃದ್ಧೆ ಸಜೀವ ದಹನ

ಹೊಸದಿಗಂತ ವರದಿ ತುಮಕೂರು   ಪಾವಗಡ ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ವೃದ್ಧೆಯೊಬ್ಬರು ಸಜೀವ ದಹನವಾಗಿರುವ ಘೋರ ಘಟನೆ ನಡೆದಿದೆ. ಕೆ.ಟಿ.ಹಳ್ಳಿ  ಗ್ರಾಮದ ನಿವಾಸಿ ಸಣ್ಣಲಕ್ಷ್ಮಮ್ಮ ಲೇಟ್ ಪರಸೆ ಕದರಪ್ಪ (67)  ಎಂಬುವವರೇ ಮೃತಪಟ್ಟ ದುರ್ದೈವಿ.ಕೆ.ಟಿ. ಹಳ್ಳಿ ಗ್ರಾಮದಲ್ಲಿರುವ ಇವರ ಗುಡಿಸಲು ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿದೆ. ವಯೋಸಹಜ ಕಾರಣಗಳಿಂದಾಗಿ ಮನೆಯಿಂದ ಹೊರಬರಲು ಸಾಧ್ಯವಾಗದೆ ಸಣ್ಣಲಕ್ಷ್ಮಮ್ಮ ಅವರು ಮನೆಯೊಳಗೇ ಸಿಲುಕಿ ಸಜೀವ ದಹನವಾಗಿರುವ ಘಟನೆ … Continue reading ಪಾವಗಡ ತಾಲ್ಲೂಕಿನಲ್ಲಿ ದುರಂತ: ಗುಡಿಸಲು ಮನೆಗೆ ಬೆಂಕಿ ಬಿದ್ದು ವೃದ್ಧೆ ಸಜೀವ ದಹನ