ಶ್ರೀರಂಗಪಟ್ಟಣದಲ್ಲಿ ದುರಂತ: ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವತಿ ದಾರುಣ ಸಾ*ವು

ಹೊಸದಿಗಂತ ವರದಿ ಶ್ರೀರಂಗಪಟ್ಟಣ:  ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಸೆಳೆತಕ್ಕೆ ಸಿಲುಕಿ ಯುವತಿ ಯೋರ್ವಳು ಧಾರುಣವಾಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಗ್ರಾಮದ ಸುರೇಶ್ ಎಂಬುವವರ ಪುತ್ರಿ ಬಿಸಿಎ ವಿದ್ಯಾರ್ಥಿನಿ ಸಿ.ಎಸ್ ಲಿಖಿತ (19) ಮೃತ ದುರ್ದೈವಿ. ಚಿನಕುರಳಿ ಬಳಿಯ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆಯನ್ನ ತಾಯಿ ಭವ್ಯ ಪ್ರತಿನಿತ್ಯ ಗ್ರಾಮದಿಂದ ಪಾಂಡವಪುರ ಪಟ್ಟಣಕ್ಕೆ ಬೆಳಿಗ್ಗೆ ಬಿಟ್ಟು, ಪುನಃ ವಾಪಸ್ಸು ತಮ್ಮ ದ್ವಿಚಕ್ರ ವಾಹನದಲ್ಲಿ ಕರೆತರುತ್ತಿದ್ದರು. ಎಂದಿನಂತೆ ಶನಿವಾರವೂ ಸಹ ಪುತ್ರಿಯನ್ನ ಸ್ವಗ್ರಾಮಕ್ಕೆ ಕರೆತರುತ್ತಿದ್ದ … Continue reading ಶ್ರೀರಂಗಪಟ್ಟಣದಲ್ಲಿ ದುರಂತ: ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವತಿ ದಾರುಣ ಸಾ*ವು