ದರ್ಗಾಗೆ ಬಂದಿದ್ದಾಗ ದುರಂತ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ಜಲಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೋಜಿಗಾಗಿ ನದಿಗೆ ಇಳಿದ ಕ್ಷಣ ದುರಂತವಾಗಿ ಮಾರ್ಪಟ್ಟ ಘಟನೆ ಮೈಸೂರಿನ ಕೆ.ಆರ್ ನಗರ ಸಮೀಪ ನಡೆದಿದೆ. ಅರ್ಕೇಶ್ವರ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದವರಲ್ಲಿ ಆರು ಮಂದಿ ನೀರಿನ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮಾಹಿತಿಯ ಪ್ರಕಾರ, ದರ್ಗಾಕ್ಕೆ ಭೇಟಿ ನೀಡಲು ಬಂದಿದ್ದ ಮುಸ್ಲಿಂ ಕುಟುಂಬದ ಎಂಟು ಮಂದಿ ನದಿಗೆ ಇಳಿದಿದ್ದರು. ಈ ವೇಳೆ ನೀರಿನ ವೇಗ ಹೆಚ್ಚಾಗಿ, ಆರು ಮಂದಿ ನಿಯಂತ್ರಣ ತಪ್ಪಿ ಮುಳುಗಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿ ಇಬ್ಬರನ್ನು ರಕ್ಷಣೆ … Continue reading ದರ್ಗಾಗೆ ಬಂದಿದ್ದಾಗ ದುರಂತ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ಜಲಸಮಾಧಿ