Tuesday, August 16, 2022

Latest Posts

ಸೆಲ್ಫಿ ತೆಗೆದುಕೊಳ್ಳುವಾಗ ಘೋರ ದುರಂತ: ತಾಯಿ-ಮಗ ಕಾಲು ಜಾರಿ ನೀರು ಪಾಲು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಪಾಯಕಾರಿ  ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಿಂದ ಎಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಇತ್ತೀಚೆಗಂತೂ ಈ ಘಟನೆಗಳು ಹೆಚ್ಚುತ್ತಲೇ ಇದೆ.

ಇದೀಗ ಮತ್ತೆ ಇಂತಹದ್ದೇ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.  ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ, ತಾಯಿ ಮತ್ತು ಮಗ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

ದೆಹಲಿ ಮೂಲದ ಪ್ರೀತಿ ಭಾಸಿನ್ ಮತ್ತು ಪುತ್ರ ಪುಲ್ಕಿತ್ ಭಾಸಿನ್(12) ಮೃತ ದುರ್ದೈವಿಗಳು.

ಘಟನೆ ವಿವರ… 

ಈ ತಾಯಿ ಮತ್ತು ಮಗ ಹೊಟೇಲ್ ಲೆಗ್ರಾಂಡ್‍ನಲ್ಲಿ ತಂಗಿದ್ದರು.  ಇವರು ಮಂಗಳವಾರ ಸೆಲ್ಫಿ ತೆಗೆದುಕೊಳ್ಳಲು ಮನಾಲಿ ನಗರದ ಬಿಯಾಸ್ ನದಿಯ ಬಳಿಗೆ ಹೋಗಿದ್ದರು. ಅಲ್ಲೆ ಇದ್ದ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.

ನೀರಿನಲ್ಲಿ ಮುಳುಗುತ್ತಿರುವ ಇವರನ್ನು ಕಂಡು ಹೊಟೇಲ್ ಉದ್ಯೋಗಿಯೊಬ್ಬರು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಹೊರ ತೆಗೆಸಿದ್ದಾರೆ. ನಾಲ್ಕು ಕಿ.ಮೀ. ಆಳದಲ್ಲಿ ಮೃತ ದೇಹ ಪತ್ತೆಯಾಗಿದೆ.

ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಮನಾಲಿ ಆಸ್ಪತ್ರೆಗೆ ಕಳುಹಿಸಲಾಗಿದೆ. ವರದಿ ನಂತರ ಕುಟುಂಬಕ್ಕೆ ಶವಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss