ಸಾಗರೋತ್ತರ ಭಾರತೀಯರಿಗಾಗಿ ಸ್ಕಿಲ್ ಇಂಡಿಯಾದಿಂದ ಹೊಸ ಯೋಜನೆ ತೇಜಸ್

ಹೊಸದಿಗಂತ ಡಿಜಿಟಲ್ ಡೆಸ್ಕ್
ದುಬೈ: ಸಾಗರೋತ್ತರ ರಾಷ್ಟ್ರಗಳಲ್ಲಿ ಉದ್ಯೋಗ ಅರಸುವ ಭಾರತೀಯರಿಗೆ ತರಬೇತಿ ನೀಡುವ ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಯೋಜನೆ ತೇಜಸ್ (ಟ್ರೈನಿಂಗ್ ಫಾರ್ ಎಮಿರೇಟ್ಸ್ ಜಾಬ್ಸ್ ಆ್ಯಂಡ್ ಸ್ಕಿಲ್ಸ್) ಗೆ ಚಾಲನೆ ನೀಡಲಾಗಿದೆ.
ದುಬೈ ಎಕ್ಸ್ಪೋನಲ್ಲಿ ಭಾಗವಹಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.
ತೇಜಸ್ ಯೋಜನೆಯು ಭಾರತೀಯರ ಕೌಶಲ, ಪ್ರಮಾಣೀಕರಣ ಮತ್ತು ಸಾಗರೋತ್ತರ ಉದ್ಯೋಗದ ಗುರಿಯನ್ನು ಹೊಂದಿದೆ. ತೇಜಸ್ ಯುಎಇಯಲ್ಲಿ ಕೌಶಲ ಮತ್ತು ಮಾರುಕಟ್ಟೆ ಆವಶ್ಯಕತೆಗಳಿಗಾಗಿ ಭಾರತೀಯ ಉದ್ಯೋಗಿಗಳನ್ನು ಸಜ್ಜುಗೊಳಿಸಲು ಮಾರ್ಗಗಳನ್ನು ರಚಿಸುವ ಉದ್ದೇಶ ಹೊಂದಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಭಾರತ ಯುವಜನತೆಯನ್ನು ಹೊಂದಿದೆ. ರಾಷ್ಟ್ರ ನಿರ್ಮಾಣ ಮತ್ತು ಇಮೇಜ್ ನಿರ್ಮಾಣ ಎರಡರಲ್ಲೂ ಯುವಕರು ಅತಿ ದೊಡ್ಡ ಪಾಲುದಾರರಾಗಿದ್ದಾರೆ. ಈ ಜನಸಂಖ್ಯೆಯ ಕೌಶಲ ಮತ್ತು ಭಾರತದಿಂದ ದೊಡ್ಡ ನುರಿತ ಉದ್ಯೋಗಿಗಳನ್ನು ಜಗತ್ತಿಗೆ ಒದಗಿಸುವುದಲ್ಲಿ ನಮ್ಮ ಗಮನ ಕೇಂದ್ರೀಕೃತವಾಗಿದೆ ಎಂದು ಸಚಿವರು ಹೇಳಿದರು.
ಠಾಕೂರ್ ಅವರು ಭಾರತ ಮತ್ತು ಯುಎಇ ನಡುವಿನ ಬಲವಾದ ಪಾಲುದಾರಿಕೆಯ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಪುನರುಚ್ಚರಿಸಿದರು. ಆರಂಭಿಕ ಹಂತದಲ್ಲಿ ಯುಎಇಯಲ್ಲಿ 10,000 ಬಲಿಷ್ಠ ಭಾರತೀಯ ಉದ್ಯೋಗಿಗಳನ್ನು ರಚಿಸುವ ಗುರಿಯನ್ನು ತೇಜಸ್ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!