ತರಬೇತಿ ವಿಮಾನ ಪತನ: ಮಹಿಳಾ ಪೈಲಟ್‌ ಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಮಾನ ಚಾಲಕರಿಗೆ ತರಬೇತಿ ನೀಡುವ ವಿಮಾನ ಪತನಗೊಂಡ ಘಟನೆ ಇಂದು ಮುಂಜಾನೆ 11.30ಕ್ಕೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆಯ ಇಂದಾಪುರದ ಕಡಬನವಾಡಿ ಗ್ರಾಮದ ಜಮೀನಿನಲ್ಲಿ ತರಬೇತಿ ವಿಮಾನ ಪತನಗೊಂಡಿದ್ದು 22 ವರ್ಷದ ಮಹಿಳಾ ಪೈಲಟ್ ಗಾಯಗೊಂಡಿದ್ದಾರೆ.

ಈ ವಿಮಾನವು ಪೈಲಟ್‌ಗಳಿಗೆ ತರಬೇತಿ ನೀಡುವ ಸಂಸ್ಥೆಯಾದ ಕಾರ್ವರ್ ಏವಿಯೇಷನ್ ​​ಕಂಪನಿಗೆ ಸೇರಿದೆ ಎಂದು ಪುಣೆ ಎಸ್ಪಿ ಡಾ.ಅಭಿನವ್ ದೇಶಮುಖ್ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ತರಬೇತಿ ಪೈಲಟ್ ಭಾವಿಕಾ ರಾಥೋಡ್ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದರು. ಆದರೆ ಅದು ಸಫಲವಾಗಲಿಲ್ಲ.

ಸಣ್ಣಪುಟ್ಟ ಗಾಯಗಳಾಗಿರುವ ಪೈಲಟ್‌ನನ್ನ ನವಜೀವನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!