Wednesday, March 29, 2023

Latest Posts

ತಿರುವನಂತಪುರಂದಲ್ಲಿ ತರಬೇತಿ ವಿಮಾನ ಪಲ್ಟಿ: ಪೈಲಟ್‌ ಅಪಾಯದಿಂದ ಪಾರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ವಿಮಾನವೊಂದು ಪಲ್ಟಿಯಾಗಿದೆ. ಪೈಲಟ್‌ ಅಪಾಯದಿಂದ ಪಾರಾಗಿದ್ದಾರೆ.

ರಾಜೀವ್ ಗಾಂಧಿ ಏವಿಯೇಷನ್ ಅಕಾಡೆಮಿಯಲ್ಲಿ ಬೆಳಗ್ಗೆ 11.36ಕ್ಕೆ ವಿಮಾನ ಟೇಕ್ ಆಫ್ ಆಗುವಾಗ ರನ್ ವೇಯಿಂದ ಪಲ್ಟಿಯಾಗಿದೆ.ನಿಲ್ದಾಣದ ಗ್ರೌಂಡ್ ಸಿಬ್ಬಂದಿ ತಕ್ಷಣವೇ ಪೈಲಟ್‌ನ ರಕ್ಷಣೆಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ.

ಸೆಸ್ನಾ 172ಆರ್ ವಿಮಾನವನ್ನು ಏಕಾಂಗಿ ಹಾರಾಟಕ್ಕೆ ಬಳಸಲಾಗುತ್ತಿತ್ತು. ಘಟನೆ ಸಂಭವಿಸಿದಾಗ ವಿಮಾನವು ರನ್‌ವೇ 32 ರಲ್ಲಿ ಟ್ಯಾಕ್ಸಿವೇ ಬಿ ಮತ್ತು ಸಿ ನಡುವೆ ಇತ್ತು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಆರ್‌ಎಫ್‌ಎಫ್ ತಂಡವು ಪೈಲಟ್‌ನನ್ನು ತಕ್ಷಣವೇ ರಕ್ಷಿಸಿದೆ ಎಂದು ರಾಜೀವ್ ಗಾಂಧಿ ಏವಿಯೇಷನ್ ​​ಅಕಾಡಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಪೈಲಟ್‌ನನ್ನು 34 ವರ್ಷದ ಅನೂಪ್ ನಾಯರ್ ಎಂದು ಗುರುತಿಸಲಾಗಿದ್ದು, ಅಪಘಾತದ ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದ ಕಾರಣ ತಿಳಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!