ದಿಗಂತ ವರದಿ ಕೊಪ್ಪಳ:
ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಸಾರಿಗೆ ನೌಕರರು ನಡೆಸಿದ ಮುಷ್ಕರದಿಂದಾಗಿ ಬುಧವಾರ ಒಂದೇ ದಿನಕ್ಕೆ ಕೊಪ್ಪಳ ವಿಭಾಗದಲ್ಲಿ ಸುಮಾರು 4೦ ಲಕ್ಷ ರೂ. ಹಾನಿಯಾಗಿದೆ. ಆದರೆ ಗುರುವಾರ ಕೂಡ ಮುಷ್ಕರ ಮುಂದುವರೆದರೆ ಸುಮಾರು 75ರಿಂದ 8೦ ಲಕ್ಷ ಹಾನಿ ಉಂಟಾಗಲಿದೆ ಎಂದು ಕೊಪ್ಪಳ ಸಾರಿಗೆ ವಿಭಾಗದ ಆಯುಕ್ತ (ಡಿಸಿ) ಎಂ.ಎ.ಮುಲ್ಲಾ ಅವರು ತಿಳಿಸಿದರು.
ಅವರು ಗುರುವಾರ ಹೊಸದಿಗಂತ ಪತ್ರಿಕೆ ಜೋತೆ ಮಾಹಿತಿ ಹಂಚಕೊಂಡ ಅವರು,
ಕೊಪ್ಪಳ ವಿಭಾಗದಲ್ಲಿ5 ಡಿಪೋಗಳಿದ್ದು ಅದರಲ್ಲಿ 402 ರೂಟ್ಸ್ ಗಳಿವೆ. 1900 ಜನ ಸಾರಿಗೆ ನೌಕರರಿದ್ದಾರೆ. ಅದರಲ್ಲಿ ಒಂದು ದಿನಕ್ಕೆ ಕೊಪ್ಪಳ ಡಿಪೋದಿಂದ 11 ಲಕ್ಷವಾದರೆ ಎರಡು ದಿನಕ್ಕೆ22 ಲಕ್ಷ ಹಾನಿಯಾಗಲಿದೆ. ಅದರಂತೆ ಗಂಗಾವತಿ ಡಿಪೋದಿಂದ ಬುಧವಾರ 11 ಲಕ್ಷ ಹಾನಿಯಾಗಿದೆ. ಆದರೆ ಗುರುವಾರ ಮತ್ತೆ 11 ಲಕ್ಷ ಸೇರಿ ಸುಮಾರು 22 ಲಕ್ಚ ನಷ್ಟವಾಗಲಿದೆ. ಕುಷ್ಟಗಿ ಡಿಪೋದಲ್ಲಿ ಬುಧವಾರ.5 ಗುರುವಾರ 05 ಲಕ್ಷ ಸೇರಿ 10 ಲಕ್ಷ ನಷ್ಟವಾಗಲಿದೆ. ಅದರಂತೆ ಕುಕನೂರು ಡಿಪೋದಿಂದ ಬುಧವಾರ 4 ಲಕ್ಷ ನಷ್ಟವಾಗಿದೆ. ಗುರುವಾರ 4 ಲಕ್ಷ ಸೇರಿ 08 ಲಕ್ಷ ಹಾನಿಯಾಗಲಿದೆ. ಆದರೆ ಯಲಬುರ್ಗಾ ಡಿಪೋದಲ್ಲಿ ಬುಧವಾರ 6ಲಕ್ಷ ನಷ್ಟವಾಗಿದೆ ಈಗೆ ಮುಂದು ವರೆದರೆ ಮತ್ತೆ 6 ಲಕ್ಷ ಸೇರಿ 12 ಲಕ್ಷ ಹಾನಿಯಾಗಲಿದೆ. ಎಂದು ತಿಳಿಸಿದರು. ಆದ್ದರಿಂದ ನೌಕರರು ಮುಷ್ಕರವನ್ನು ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಹಂತ ಹಂತವಾಗ ಬೇಡಿಕೆಗಳ ಈಡೆರಿಕೆಗೆ ಮುಂದಾಗಬೇಕು ಎಂದು ಸಾರಿಗೆ ನೌಕರರಲ್ಲಿ ಮನವಿಸಿದರು.