Sunday, April 18, 2021

Latest Posts

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ: ನಾಲ್ಕು ನಿಗಮಗಳಿಗೆ 17 ಕೋಟಿ ನಷ್ಟ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಸಾರಿಗೆ ನೌಕರರು 6 ನೇ ವೇತನ ಆಯೋಗ ಜಾರಿಗೆ ತರುವಂತೆ ಒತ್ತಾಯಿಸಿ ಇಂದಿನಿಂದ ಮುಷ್ಕರ ಪ್ರಾರಂಭಿಸಿದ್ದು, ಈ ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಇನ್ನು ಈ ಮುಷ್ಕರದಿಂದ ಸಾರಿಗೆ ಇಲಾಖೆಗೆ ಭಾರೀ ನಷ್ಟ ಸಂಭವಿಸಿದೆ. ಈ ಕುರಿತು ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿ ಮಾಹಿತಿ ಹೊರಹಾಕಿದೆ. ಇಂದಿನ ಮುಷ್ಕರದಿಂದ ಒಟ್ಟು ನಾಲ್ಕು ನಿಗಮಗಳಿಗೆ 17 ಕೋಟಿ ನಷ್ಟವಾಗಿದೆ ಎಂದು ಕೆಎಸ್​ಆರ್​ಟಿಸಿ ಹೇಳಿದೆ.
ಯಾವ ನಿಗಮಕ್ಕೆ ಎಷ್ಟು ನಷ್ಟ..?
ಕೆಎಸ್‌ಆರ್​ಟಿಸಿಗೆ- 7 ಕೋಟಿ ನಷ್ಟ, ಬಿಎಂಟಿಸಿಗೆ- 3 ಕೋಟಿ ನಷ್ಟ , ವಾಯುವ್ಯ ಸಾರಿಗೆ- 3.5 ಕೋಟಿ ನಷ್ಟ , ಈಶಾನ್ಯ ಸಾರಿಗೆ- 3.5 ಕೋಟಿ ನಷ್ಟ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss