Sunday, April 11, 2021

Latest Posts

ಸಾರಿಗೆ ನೌಕರರ ಮುಷ್ಕರ: ವಿಶೇಷ ರೈಲುಗಳ ಓಡಾಟಕ್ಕೆ ಅನುಮತಿ, ವೇಳಾಪಟ್ಟಿ ಬಿಡುಗಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೈಋತ್ಯ ರೈಲ್ವೆಗೆ ಪತ್ರವನ್ನು ಬರೆದಿದ್ದು, ವಿಶೇಷ ರೈಲುಗಳನ್ನು ಓಡಿಸುವಂತೆ ಮನವಿಯನ್ನು ಮಾಡಿದ್ದಾರೆ.
ಮುಂದಿನ ವಾರ ಯುಗಾದಿ ಹಬ್ಬವಿದ್ದು, ಜನರು ಹೆಚ್ಚಾಗಿ ಹೊರ ಜಿಲ್ಲೆಗಳಗೆ ಸಂಚಾರ ನಡೆಸಲಿದ್ದಾರೆ.
ಈ ಹಿನ್ನೆಲೆ ಸರಕಾರದ ಮನವಿಗೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ. 9 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಜೊತೆಗೆ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರೈಲುಗಳ ವೇಳಾಪಟ್ಟಿ:

  • ಯಶವಂತಪುರ-ಬೆಳಗಾವಿ ರೈಲು ಏ.9ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.10ಕ್ಕೆ ಬೆಳಗಾವಿ ತಲುಪಲಿದೆ. ರಾತ್ರಿ 10ಕ್ಕೆ ಯಶವಂತಪುರಕ್ಕೆ ಹೊರಡಲಿದೆ.
  •  ಯಶವಂತಪುರ-ವಿಜಯಪುರ ರೈಲು ಏ.9ರಂದು ಸಂಜೆ 6.20ಕ್ಕೆ ವಿಜಯಪುರಕ್ಕೆ ಹೊರಡಲಿದೆ.
  • ಮೈಸೂರು-ಬೆಂಗಳೂರು ರೈಲು ಏ.9ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಹೊರಡಲಿದೆ.
  •  ಏ. 9 ಮತ್ತು 10ರಂದು ಮೈಸೂರು-ಯಶವಂತಪುರ ವಿಶೇಷ ರೈಲು ಸಂಚಾರ ನಡೆಸಲಿದೆ. ಮೈಸೂರಿನಿಂದ ಬೆಳಗ್ಗೆ 8.25ಕ್ಕೆ ಮತ್ತು ಯಶವಂತಪುರದಿಂದ ಮಧ್ಯಾಹ್ನ 1.15ಕ್ಕೆ ರೈಲು ಹೊರಡಲಿದೆ.
  • ಮೈಸೂರು-ಬೀದರ್ ರೈಲು ಏಪ್ರಿಲ್ 9ರಂದು ರಾತ್ರಿ 8ಕ್ಕೆ ಮೈಸೂರಿನಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.
  •  ಯಶವಂತಪುರ-ಬೀದರ್ ರೈಲು (ಕಲಬುರಗಿ ಮಾರ್ಗ) ಏಪ್ರಿಲ್ 10ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಮತ್ತು ಮರುದಿನ ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss